ಚಂಡೀಗಢ: 67 ವಯಸ್ಸಿನ ವೃದ್ಧನ ಜೊತೆ 24 ವಯಸ್ಸಿನ ಯುವತಿ ವಿವಾಹವಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ದಂಪತಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ ಸೂಚನೆ ನೀಡಿದೆ.
ಶಮ್ಶೀರ್ ಸಿಂಗ್(67) ಹಾಗೂ ನವ್ ಪ್ರೀತ್ ಕೌರ್(24) ಮದುವೆಯಾದ ನವದಂಪತಿ. ಧುರಿ ಉಪವಿಭಾಗದ ಬಲಿಯಾನ್ ಗ್ರಾಮದ ನಿವಾಸಿ ಸಿಂಗ್ ಅವರು ಚಂಡೀಗಢ ಗುರುದ್ವಾರದಲ್ಲಿ ನವ್ ಪ್ರೀತ್ ಕೌರ್ ಯುವತಿಯನ್ನು ಜನವರಿಯಲ್ಲಿ ಮದುವೆಯಾಗಿದ್ದಾರೆ. ಈ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಆದರೆ ಇವರ ಮದುವೆಗೆ ಕುಟುಂಬ ಸದಸ್ಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದಂಪತಿ ತಮಗೆ ರಕ್ಷಣೆ ಕೊಡುವಂತೆ ಮನವಿ ಮಾಡಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
Advertisement
Advertisement
ಇವರ ಮದುವೆಗೆ ಎರಡು ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ದಂಪತಿ ಹೈಕೋರ್ಟ್ ಗೆ ಬಂದು ತಮ್ಮ ಕುಟುಂಬ ಮತ್ತು ಸಂಬಂಧಿಕರಿಂದ ಅಪಾಯವಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. ಬಳಿಕ ಫೆಬ್ರವರಿ 4 ರಂದು ನ್ಯಾಯಾಲಯವು ಸಂಗ್ರೂರ್ ಮತ್ತು ಬರ್ನಾಲಾ ಜಿಲ್ಲೆಯ ಎಸ್‍ಎಸ್‍ಪಿ ಗಳಿಗೆ ದಂಪತಿಗೆ ಸುರಕ್ಷತೆಯನ್ನು ಒದಗಿಸುವಂತೆ ಆದೇಶ ನೀಡಿದೆ ಎಂದು ದಂಪತಿಯ ಪರ ವಕೀಲ ಮೊಬಿತ್ ಸದಾನಾ ತಿಳಿಸಿದ್ದಾರೆ.
Advertisement
ದಂಪತಿ ತಮ್ಮ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ಇಬ್ಬರು ವಯಸ್ಕರಾಗಿದ್ದು, ಮದುವೆಯಾಗುವ ಹಕ್ಕನ್ನು ಹೊಂದಿದ್ದು, ವಿವಾಹ ಕಾನೂನು ಬದ್ಧವಾಗಿದೆ. ಸಂಗ್ರೂರ್ ಎಸ್‍ಎಸ್‍ಪಿ ಸಂದೀಪ್ ಗಾರ್ಗ್ ಹೈಕೋರ್ಟ್ ಆದೇಶವನ್ನು ಅನುಸರಿಸಿ ಕಾನೂನಿನ ಪ್ರಕಾರ ದಂಪತಿಗೆ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುತ್ತಿದ್ದಾರೆ ಎಂದು ಸದಾನ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv