ಗಾಂಧಿನಗರ: ಸಾಧನೆಗೆ ವಯಸ್ಸಿನ ಅಂತರವಿಲ್ಲ ಎಂಬುದನ್ನು ಗುಜರಾತ್‍ನ ವೃದ್ಧೆಯೊಬ್ಬರು ಪಿಹೆಚ್‍ಡಿ ಪದವಿಯನ್ನು ಪಡೆದುಕೊಳ್ಳುವ ಮೂಲಕವಾಗಿ ಸಾಬೀತು ಮಾಡಿದ್ದಾರೆ.
ಗುಜರಾತ್‍ನ ವಡೋರಾದ ಉಷಾ ಲೊದಯ ಅವರು 20 ವರ್ಷ ವಯಸ್ಸಿನವರಿದ್ದಗಲೇ ಕಾಲೇಜ್ ಬಿಟ್ಟು ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆಗಿನಿಂದಲೂ ಅವರಿಗೆ ಪಿಹೆಚ್‍ಡಿ ಮುಗಿಸಿ ಡಾಕ್ಟರೇಟ್ ಪಡೆಯುವ ಆಸೆಯೊಂದು ಇತ್ತು. ಆದರೆ ಆಗ ಸಾಧ್ಯವಾಗಿರಲಿಲ್ಲ. ಇದೀಗ ವೃದ್ಧಾಪ್ಯದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
Advertisement
Gujarat | A woman from Vadodara earns PhD degree at the age of 67.
My parents wanted me to continue studies after marriage but I couldn’t continue and focused on my family. But now I am satisfied. I was inspired by my guruji to join 3-year graduation course: Usha Lodaya pic.twitter.com/S8fTjyhyG6
— ANI (@ANI) June 24, 2021
Advertisement
ಜೈನಿಸಮ್ ವಿಷಯದಲ್ಲಿ ಉಷಾ ಲೊದಯ ಅವರು ಪಿಹೆಚ್‍ಡಿ ಮುಗಿಸಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಪಿಹೆಚ್‍ಡಿ ಮಾಡುವ ಇವರ ಕನಸಿಗೆ ಮಗಳು ನೀರೆರೆದಿದ್ದಾರೆ. ಉಷಾ ತನ್ನ 67 ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪೂರ್ಣಗೊಳಿಸಿದ್ದಕ್ಕಾಗಿ ನೆಟ್ಟಿಗರು ಶ್ಲಾಘಿಸಿದ್ದಾರೆ. ವಯಸ್ಸು ಸಾಧನೆಗೆ ಯಾವುದೇ ಅಡ್ಡಿಯಿಲ್ಲ, ನೀವು ಸ್ಫೂರ್ತಿ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
I tell my children to never lose hope. My daughter-in-law helped me a lot, says Usha Lodaya pic.twitter.com/fvDPuHiHlc
— ANI (@ANI) June 24, 2021
Advertisement
ನಾನು ಮದುವೆಯಾದ ಮೊದಲ ವರ್ಷ ಪದವಿ ಮಾಡುತ್ತಿದ್ದೆ. ನನಗೆ ಆಗಿನಿಂದಲೂ ಡಾಕ್ಟರ್ ಆಗಬೇಕೆಂಬ ಕನಸಿತ್ತು. ನನ್ನ ಪೋಷಕರು ನನಗೆ ವಿದ್ಯಾಭ್ಯಾಸ ಮುಂದುವರೆಸಲು ಹೇಳಿದರು. ನನಗೆ ಅದರ ಮೇಲೆ ಪೋಕಸ್ ಮಾಡಲಾಗಲಿಲ್ಲ. ಆದರೆ ಈಗ ಪಿಹೆಚ್‍ಡಿ ಮುಗಿಸಿದ್ದು, ನನಗೆ ತೃಪ್ತಿ ತಂದಿದೆ ಎಂದು ಉಷಾ ಹೇಳಿದ್ದಾರೆ.