ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಇಂದು 662 ಮಂದಿಗೆ ಸೋಂಕಯ ತಗುಲಿದೆ. 1,344 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
12,074 ಬಲಿಯೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 9,17,571ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದು, ರಾಜ್ಯದಲ್ಲಿ 11,861 ಸಕ್ರಿಯ ಪ್ರಕರಣಗಳಿವೆ. ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 206 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement
Advertisement
ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಪ್ರಮಾಣ ಶೇ.0.76 ಮತ್ತು ಮರಣ ಪ್ರಮಾಣ ಶೇ.0.60ರಷ್ಟಿದೆ. ಇಂದು ಯುಕೆಯಿಂದ ಬಂದ 137 ಜನರನ್ನು ಆರ್.ಟಿ.-ಪಿಸಿಆರ್ ಮತ್ತು ಇತರೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರ ವರದಿ ಪಾಸಿಟಿವ್ ಬಂದಿದೆ. 50 ಜನರ ವರದಿ ಲಭ್ಯವಾಗಬೇಕಿದೆ. ಯುಕೆಯಿಂದ ಬಂದ 29 ಜನರು ಕೊರೊನಾ ಸೋಂಕಿತರಾಗಿದ್ದಾರೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 2, ಬಳ್ಳಾರಿ 14, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 370, ಬೀದರ್ 1, ಚಾಮರಾಜನಗರ 8, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 6, ಚಿತ್ರದುರ್ಗ 7, ದಕ್ಷಿಣ ಕನ್ನಡ 35, ದಾವಣಗೆರೆ 12, ಧಾರವಾಡ 10, ಗದಗ 0, ಹಾಸನ 25, ಹಾವೇರಿ 0, ಕಲಬುರಗಿ 5, ಕೊಡಗು 1, ಕೋಲಾರ 31, ಕೊಪ್ಪಳ 6, ಮಂಡ್ಯ 14, ಮೈಸೂರು 23, ರಾಯಚೂರು 1, ರಾಮನಗರ 0, ಶಿವಮೊಗ್ಗ 7, ತುಮಕೂರು 38, ಉಡುಪಿ 7, ಉತ್ತರ ಕನ್ನಡ 5, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.