– ಪ್ರಾಣ ರಕ್ಷಣೆಗೆ ಹೋಟೆಲ್‌ನ ಕಿಟಕಿಗಳಿಂದ ಹಾರಿದ ಅನೇಕರು ಸಾವು
ಇಸ್ತಾಂಬುಲ್: ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ (Turkey Ski Resort) ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 66 ಮಂದಿ ಸಾವನ್ನಪ್ಪಿದ್ದಾರೆ.
Advertisement
ರಾಜಧಾನಿ ಅಂಕಾರಾದ ವಾಯುವ್ಯಕ್ಕೆ 170 ಕಿಲೋಮೀಟರ್ (100 ಮೈಲುಗಳು) ದೂರದಲ್ಲಿರುವ ಕರ್ತಲ್ಕಯಾ ರೆಸಾರ್ಟ್‌ಗೆ ಹಲವಾರು ಸಚಿವರು ಧಾವಿಸಿದ್ದಾರೆ. ಬೆಂಕಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 10 ವರ್ಷದ ಮಗನ ಮೇಲೆ 5 ನಿಮಿಷ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ
Advertisement
Advertisement
ಅವಘಡದಿಂದ ಆಗಿರುವ ಪ್ರಾಣಹಾನಿಗೆ ತುಂಬಾ ನೋವಾಗಿದೆ. 66 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 51 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ವಿಷಾದ ವ್ಯಕ್ತಪಡಿಸಿದ್ದಾರೆ.
Advertisement
ಮರದಿಂದಲೇ ಮಾಡಲಾಗಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನಲ್ಲಿ ಬೆಳಗಿನ ಜಾವ 3:27 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಕಿ ಅವಘಡದಿಂದ ಪಾರಾಗಲು ಅನೇಕರು ಹೋಟೆಲ್‌ನ ಕಿಟಕಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಏಳ್ಗೆಗಾಗಿ ವಿದೇಶಗಳಿಗೆ ತೆರಿಗೆ, ಫೆಡರಲ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ರದ್ದು; ಮಹತ್ವದ ಆದೇಶಗಳಿಗೆ ಟ್ರಂಪ್ ಸಹಿ
ಹೋಟೆಲ್‌ನಲ್ಲಿ ಸುಮಾರು 238 ಅತಿಥಿಗಳು ತಂಗಿದ್ದರು. ಎರಡು ವಾರಗಳ ಶಾಲಾ ರಜೆಯಿಂದಾಗಿ ಹೋಟೆಲ್‌ನಲ್ಲಿ ತಂಗಿದವರ ಸಂಖ್ಯೆ ಹೆಚ್ಚಾಗಿತ್ತು. ಬೆಂಕಿ ರೆಸಾರ್ಟ್‌ನಿಂದ ಪ್ರಾರಂಭವಾಗಿ ಬೇಗನೆ ಹರಡಿತ್ತು.