ಮುಂಬೈ: ಮುಂಬೈಯಿಂದ ಗೋವಾಗೆ ಹೊರಟಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಸೋಮವಾರ 2000 ಜನರು ಪ್ರಯಾಣಿಸಿದ್ದು, ಅದರಲ್ಲಿ 66 ಮಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಿಲ್ಲ ಎಂದು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ಮುಂಬೈಯಿಂದ ಗೋವಾಗೆ ಹೊರಟಿದ್ದ ಹಡಗಿನಲ್ಲಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಹಡಗು ಗೋವಾದಲ್ಲಿ ತಂಗಿದ ಬಳಿಕ ಎಲ್ಲರನ್ನೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 66 ಮಂದಿಗೆ ಪಾಸಿಟಿವ್ ಕಂಡುಬಂದಿದೆ. ಇದನ್ನೂ ಓದಿ: ದೇಶಾದ್ಯಂತ ಮೊದಲ ದಿನ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ
Advertisement
Advertisement
ಇದೀಗ ಪಾಸಿಟಿವ್ ಕಂಡುಬಂದವರನ್ನು ಪ್ರತ್ಯೇಕ ವಾರ್ಡ್ನಲ್ಲಿ ಇರಿಸಿಲ್ಲ ಎಂದು ಪ್ರಯಾಣಿಕರು ಹಡಗಿನಿಂದ ಹೊರಗಡೆ ಹೋಗಲು ಸಾಧ್ಯವಾಗದೆ ಒಳಗಡೆಯೇ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಪಡೆಯದ ಪ್ರಯಾಣಿಕನಿಗೆ ಗೂಸಾ ಕೊಟ್ಟ ಪೊಲೀಸ್ ಅಧಿಕಾರಿ ವೀಡಿಯೋ ವೈರಲ್
Advertisement
ಹಡಗಿನ ಸಿಬ್ಬಂದಿ ಸೇರಿ ಒಟ್ಟು 2016 ಮಂದಿ ಹಡಗಿನಲ್ಲಿ ಪ್ರಯಾಣಿಸಿದ್ದಾರೆ. ಪ್ರತಿಯೊಬ್ಬರ ಫಲಿತಾಂಶ ಪ್ರಕಟವಾಗುವವರೆಗೂ ಯಾರೂ ಹಡಗಿನಿಂದ ಇಳಿಯುವಂತಿಲ್ಲ ಎಂದು ಅಧಿಕಾರಿಗಳು ಸೂಚನೆ ನೀಡಿದ್ದರು. ಹೀಗಾಗಿ ಹಡಗಿನ ಒಳಗಡೆಯೇ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.