-ಇವತ್ತು ಒಂದೇ ದಿನ 16 ಮಂದಿಗೆ ಸೋಂಕು
-ಬೀದರ್ ನಲ್ಲಿ 7 ಮಂದಿಗೆ ಕೊರೊನಾ
ಬೆಂಗಳೂರು: ಇವತ್ತು ಒಂದೇ ದಿನ 16 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾದಿಂದ 26 ಮಂದಿ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ರೋಗಿ 590ರಿಂದಲೇ 7 ಜನಕ್ಕೆ ಕೊರೊನಾ ಸೋಂಕು ತಗುಲಿದೆ. ಇನ್ನು ಬೆಂಗಳೂರಿನ 40 ವರ್ಷದ ಪುರುಷನಿಗೆ ಸೋಂಕು ಹೇಗೆ ಕಾಣಿಸಿಕೊಂಡಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Advertisement
ಸೋಂಕಿತರ ವಿವರ:
ಸಂಜೆ ಬಿಡುಗಡೆಯಾದ ಬುಲೆಟಿನ್
1. ರೋಗಿ 643: ಬೀದರ್ ನಿವಾಸಿ 35 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
2. ರೋಗಿ 644: ಬೀದರ್ ನಿವಾಸಿ 46 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
3. ರೋಗಿ 645: ಬೀದರ್ ನಿವಾಸಿ 50 ವರ್ಷದ ಮಹಿಳೆ. ರೋಗಿ 590ರ ಜೊತೆ ಸಂಪರ್ಕ
Advertisement
4. ರೋಗಿ 646: ಬೀದರ್ ನಿವಾಸಿ 16 ವರ್ಷದ ಬಾಲಕ. ರೋಗಿ 590ರ ಜೊತೆ ಸಂಪರ್ಕ
4. ರೋಗಿ 647: ಬೀದರ್ ನಿವಾಸಿ 72 ವರ್ಷದ ವೃದ್ಧೆ. ರೋಗಿ 590ರ ಜೊತೆ ಸಂಪರ್ಕ
5. ರೋಗಿ 648: ಬೀದರ್ ನಿವಾಸಿ 22 ವರ್ಷದ ಯುವಕ. ರೋಗಿ 590ರ ಜೊತೆ ಸಂಪರ್ಕ
6. ರೋಗಿ 649: ಬೀದರ್ ನಿವಾಸಿ 60 ವರ್ಷದ ವೃದ್ಧ. ರೋಗಿ 590ರ ಜೊತೆ ಸಂಪರ್ಕ
7. ರೋಗಿ 650: ಬೆಂಗಳೂರ ನಗರದ 40 ವರ್ಷದ ಪುರುಷ. ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
8. ರೋಗಿ 651: ದಾವಣಗೆರೆಯ 48 ವರ್ಷದ ಮಹಿಳೆ. ರೋಗಿ 533ರ ಜೊತೆ ದ್ವಿತೀಯ ಸಂಪರ್ಕ
Advertisement
Advertisement
ಬೆಳಗ್ಗೆ ಕಲಬುರಗಿಯಲ್ಲಿ 56 ವರ್ಷದ ಪುರುಷ ಸಾವನ್ನಪ್ಪಿರುವ ಬಗ್ಗೆ ಆರೋಗ್ಯ ಇಲಾಖೆ ತಿಳಿಸಿತ್ತು. ಸಂಜೆ ಬುಲೆಟಿನ್ ನಲ್ಲಿ ದಾವಣಗೆರೆಯ 48 ವರ್ಷದ ಮಹಿಳೆ (ರೋಗಿ 651) ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಮೇ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು. ದಾವಣಗೆರೆಯಲ್ಲಿ ಇದು ಎರಡನೇ ಸಾವು ಆಗಿದೆ. ಇಂದು ಒಟ್ಟು 28 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಪತ್ರಿಕಾ ಪ್ರಕಟಣೆ 04-05-2020@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept @BMTC_BENGALURU @NammaBESCOM pic.twitter.com/9v7S6J82rC
— K'taka Health Dept (@DHFWKA) May 4, 2020