ಮುಂಬೈ: 65 ವರ್ಷದ ವೃದ್ಧನೊಬ್ಬ ಯುವತಿಯೊಂದಿಗೆ ಡೇಟಿಂಗ್ ಮಾಡುವ ಆಸೆಯಿಂದ ಬರೋಬ್ಬರಿ 45 ಲಕ್ಷ ರೂ.ವನ್ನು ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ವೃದ್ಧ ಮಲಾಡ್ ಉಪನಗರದ ನಿವಾಸಿ ಎಂದು ತಿಳಿದುಬಂದಿದ್ದು, ಈಬಗ್ಗೆ ಕುರಾರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವೃದ್ಧ ದೂರು ನೀಡಿದ ಆಧಾರದ ಮೇರೆಗೆ ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಉದಯ್ ರಾಜೇಶ್ರಿಕೆ ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ವೃದ್ಧನಿಗೆ ಈಗಾಗಲೇ ಮದುವೆಯಾಗಿದ್ದು, ಮತ್ತೆ ಹುಡುಗಿ ಬೇಕಾಗಿದೆ ಎಂದು ವೆಬ್‍ಸೈಟ್ ವೊಂದರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹೀಗಾಗಿ ಮೀರಾ ಎಂಬ ಮಹಿಳೆ ವೃದ್ಧನಿಗೆ ಕರೆ ಮಾಡಿ ಪ್ರೀಮಿಯಂ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳಲು ಶುಲ್ಕವನ್ನು ಪಾವತಿಸಬೇಕು ಎಂದು ಹೇಳಿದ್ದಾಳೆ. ಅಂತೆಯೇ ವೃದ್ಧ ಹಣ ಕಟ್ಟಿ ರಿಜಿಸ್ಟರ್ ಆದ ಬಳಿಕ ಆಕೆ ಮೂವರು ಹುಡುಗಿಯರ ಫೋಟೋ ಕಳಿಸಿ ಒಂದನ್ನು ಆಯ್ಕೆ ಮಾಡಲು ಸೂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಆಕೆ ಕಳುಹಿಸಿದ್ದ ಮೂರು ಫೋಟೋಗಳಲ್ಲಿ ನಾನು ಒಂದನ್ನು ಆಯ್ಕೆ ಮಾಡಿಕೊಂಡೆ. ನಂತರ ಹುಡುಗಿಯನ್ನು ಭೇಟಿ ಮಾಡಲು 10 ಲಕ್ಷ ರೂ. ಹಣ ನೀಡಬೇಕು. ಅಲ್ಲದೆ ಆಕೆಯ ಜೊತೆ ಒಂದು ವರ್ಷ ಕಾಲ ಡೇಟ್ ಮಾಡಬಹುದು ಎಂದು ಹೇಳಿದ್ದಳು. ಅಷ್ಟೇ ಅಲ್ಲದೆ ವಿಡಿಯೋ ಕರೆ ಮತ್ತು ಭೇಟಿ ಮಾಡಲು ಎಂದು ಹೆಚ್ಚು ಹಣವನ್ನು ಕಟ್ಟಿಸಿಕೊಂಡಿದ್ದಳು. ಎಂದು ದೂರಿನಲ್ಲಿ ತಿಳಿಸಿದ್ದಾರೆ.
Advertisement
ವೃದ್ಧನ ಬಳಿಕ ಸುಮಾರು 30 ಲಕ್ಷ ಹಣವನ್ನು ಕಟ್ಟಿಸಿಕೊಂಡ ಬಳಿಕ ಕೊನೆಗೆ ಮೀರಾ ರೋಸಿ ಅಗರ್ವಾಲ್ ಎಂಬ ಯುವತಿಯ ಫೋನ್ ನಂಬರ್ ಕೊಟ್ಟಿದ್ದಾಳೆ. ರೋಸಿ ಕೂಡ ವೃದ್ಧನ ಬಳಿ ಅನೇಕ ನೆಪ ಹೇಳಿಕೊಂಡು ಹಣವನ್ನು ಪಡೆದುಕೊಂಡಿದ್ದಾಳೆ. ಕೊನೆಗೆ ವೃದ್ಧನಿಗೆ ವೆಬ್‍ಸೈಟ್ ಬಗ್ಗೆ ಅನುಮಾನ ಬಂದಿದ್ದು, ತಾನೂ ರಿಜಿಸ್ಟರ್ ಮಾಡಿಕೊಂಡಿದ್ದ ವೆಬ್ ಸೈಟ್ ಹುಡುಕಾಡಿದ್ದಾರೆ. ಆಗ ಆ ವೆಬ್‍ಸೈಟ್‍ನ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದರು. ಆಗ ತಾನು ಮೋಸ ಹೋದ ಬಗ್ಗೆ ವೃದ್ಧನಿಗೆ ಗೊತ್ತಾಗಿದೆ.
ತಕ್ಷಣ ಮೀರಾ ಹಾಗೂ ರೋಸಿಗೆ ಫೋನ್ ಮಾಡಿ ಹಣ ವಾಪಸ್ ಕೇಳಿದ್ದಾರೆ. ಆಗ ಅವರು 2019 ಜನವರಿ 10ರಂದು ಎಲ್ಲ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಈವರೆಗೂ ಹಣ ನೀಡಲಿಲ್ಲ. ಮತ್ತೆ ಫೋನ್ ಮಾಡಿದಾಗ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಕೊನೆಗೆ ಈ ಬಗ್ಗೆ ಕುಟುಂಬದವರಿಗೂ ಹೇಳಲು ಆಗದೆ ಸುಮ್ಮನಿದ್ದರು. ದಿನಕಳೆದಂತೆ ಕುಟುಂದವರಿಗೆ ಈ ಬಗ್ಗೆ ತಿಳಿದಿದೆ. ಹೀಗಾಗಿ ಫೆಬ್ರವರಿಯಲ್ಲಿ ಕುರಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರ್ಚ್ ನಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ನಾವು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ವ್ಯಕ್ತಿ ಕೊಟ್ಟ ಫೋನ್ ನಂಬರ್ ಗಳು ಹಾಗೂ ಹಣ ಹಾಕಿದ ಬ್ಯಾಂಕ್ ಅಕೌಂಟ್‍ಗಳ ನಂಬರ್ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಇನ್ಸ್ ಪೆಕ್ಟರ್ ಹೇಳಿದ್ದಾರೆ.