ನಿನ್ನ ಬೆತ್ತಲೆ ಫೋಟೋ ಲೀಕ್ ಮಾಡ್ತೀನಿ – ಬೆದರಿಕೆ ಹಾಕಿ ಟಿಕ್ಕಿಯಿಂದ 65 ಲಕ್ಷ ರೂ. ಪೀಕಿದ ಸ್ನೇಹಿತ

Public TV
1 Min Read
mobile video

ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರೊಬ್ಬರ (Software Engineering) ಬೆತ್ತಲೆ ಫೋಟೋ ಲೀಕ್ ಮಾಡುವ ಬೆದರಿಕೆ ಹಾಕಿ ಸ್ನೇಹಿತನಿಂದಲೇ ಬರೋಬ್ಬರಿ 65 ಲಕ್ಷ ರೂ. ಹಣ ಪೀಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಂಪನಿಯಲ್ಲಿ (Private Company) ಶಿವಮೊಗ್ಗ ಮೂಲದ ಯುವಕ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ 18 ವರ್ಷಗಳಿಂದ ಟೆಕ್ಕಿಗೆ ಸ್ನೇಹಿತನಾಗಿದ್ದ ಆರೋಪಿ ಅಕ್ಷಯ್‌ಕುಮಾರ್, ಒಂದು ವರ್ಷದ ಹಿಂದೆ ಟೆಕ್ಕಿ ಬಳಿ ಬಂದು, ನಿನ್ನ ಖಾಸಗಿ ವಿಡಿಯೋ ಮತ್ತು ಫೋಟೋ ವ್ಯಕ್ತಿಯೊಬ್ಬರಿಗೆ ಸಿಕ್ಕಿವೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕದೇ ಇರೋಕೆ ಹನ್ನೆರಡು ಲಕ್ಷ ಹಣ ಕೇಳ್ತಿದ್ದಾನೆ ಅಂದಿದ್ದ. ಇದನ್ನೂ ಓದಿ: ಮೋದಿ ಪೋಸ್ಟರ್ ವಿರೂಪ – ಮಹಾರಾಷ್ಟ್ರದ ಯುವ ಮೋರ್ಚಾ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್

ಆ ಮಾತನ್ನು ನಂಬಿದ್ದ ಟೆಕ್ಕಿ ಭಯಗೊಂಡು 12 ಲಕ್ಷ ಹಣ ಕೊಟ್ಟಿದ್ದ. ಇದಾದ ನಂತರವೂ ಕಳೆದ ಒಂದು ವರ್ಷದಿಂದ ಇದೇ ಫೋಟೋ, ವಿಡಿಯೋ ವಿಚಾರ ಸಂಬಂಧ ಪದೇ ಪದೇ ಹಣ ಪಡೆದುಕೊಂಡು, ಒಟ್ಟು 65 ಲಕ್ಷ ರೂ. ಪೀಕಿದ್ದಾನೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

ಕೊನೆಗೆ ಎಂಜಿನಿಯರಿಂಗ್ ಸ್ನೇಹಿತ ಅಕ್ಷಯ್ ಕುಮಾರ್ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಗೆ (VidhanaSoudha Police Station) ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ವೇಳೆ ಸ್ನೇಹಿತನಾದ ಅಕ್ಷಯ್ ಕುಮಾರ್ ಮತ್ತು ಭರತ್ ಅನ್ನುವವರೇ ಪ್ಲ್ಯಾನ್‌ ಮಾಡಿ ಮಾಡಿ ಈ ರೀತಿ ಹಣ ವಸೂಲಿ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಸದ್ಯ ಇಬ್ಬರನ್ನ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ: ಸುಧಾಕರ್

Share This Article