– ದೇಹ ಕೊಳಕಾಗಿರುವುದರಿಂದ ಆರೋಗ್ಯವಾಗಿದ್ದಾನೆ
ಟೆಹ್ರಾನ್: 65 ವರ್ಷಗಳಿಂದ ಸ್ನಾನ ಮಾಡದೇ ಇರುವ ವಿಶ್ವದ ಅತ್ಯಂತ ಕೊಳಕು ವ್ಯಕ್ತಿಯೊಬ್ಬರು ಇರಾನ್‍ನಲ್ಲಿ ಕಂಡುಬಂದಿದ್ದಾರೆ.
ಅಮೌ ಹಜಿ (83) ವರ್ಷದ ಈ ಇವರು ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ. ಈತ 65 ವರ್ಷಗಳಿಂದ ಸ್ನಾನ ಮಾಡಿಲ್ಲವಂತೆ. ಇವರಿಗೆ ನೀರು ಎಂದರೆ ಭಯವಂತೆ ಮತ್ತು ಸ್ನಾನ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾಗೀ ಸ್ನಾನವೇ ಮಾಡುವುದಿಲ್ಲ. ದೇಹವನ್ನು ನಾನು ಕೊಳಕು ಮಾಡಿಟ್ಟುಕೊಂಡಿರುವುದರಿಂದ ತಾನು ಇಷ್ಟು ದಿನ ಬದುಕುಳಿದಿದ್ದೇನೆ ಎಂದು ಅಮೌ ಹೇಳಿಕೊಂಡಿದ್ದಾರೆ.
Advertisement
Advertisement
ಅಮೌ ಇರಾನಿನ ಮರುಭೂಮಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಾರೆ. ಮಾಂಸಾಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮನೆಯಲ್ಲಿ ಬೇಯಿಸಿದ ಆಹಾರವನ್ನು ತಿನ್ನಲು ಇಷ್ಟಪಡುವುದಿಲ್ಲ. ಇವರು ಉಳಿದುಕೊಳ್ಳುಲು ಸ್ವಂತ ಮನೆ ಇಲ್ಲ. ಈ ಕಾರಣಕ್ಕೆ ಇವರು ಸಿಕ್ಕ ಜಾಗದಲ್ಲಿ ಉಳಿದುಕೊಂಡು ಕಾಲ ಕಳೆಯುತ್ತಾರೆ. ಅಮೌ ಪರಿಸ್ಥಿತಿ ಕಂಡ ಗ್ರಾಮಸ್ಥರು ಆತನಿಗಾಗಿ ಗುಡಿಸಿಲನ್ನು ನಿರ್ಮಸಿಕೊಟ್ಟದ್ದರು. ಆದರೆ ಒಂದು ದಿನವು ಅಲ್ಲಿ ಅಮೌ ಹಜಿ ಉಳಿದುಕೊಂಡಿಲ್ಲ.
Advertisement
Advertisement
ಅಮೌ ಹಜಿ ಅವರು ಸ್ನಾನ ಮಾಡದೇ ಇದ್ದರೂ ಇವರಿಗೆ ಯಾವುದೇ ರೀತಿಯ ಸೋಂಕು ತಗುಲಿಲ್ಲ ಎಂಬುದು ಆಶ್ಚರ್ಯಕರವಾದ ಸಂಗತಿಯಾಗಿದೆ. ಪ್ರತಿದಿನ 5 ಲೀಟರ್ ನೀರನ್ನು ಕುಡಿಯುತ್ತಾರೆ. ಇವರಿಗೆ ಸಿಗರೇಟು ಎಂದರೆ ಬಲು ಇಷ್ಟವಾಗಿದೆ. ಪ್ರಾಣಿಗಳ ಒಣಗಿದ ಸಗಣಿಯನ್ನು ತೆಗೆದುಕೊಂಡು ಧೂಮಪಾನವನ್ನು ಮಾಡುತ್ತಾರೆ.
ನನ್ನ ದೇಹ ಕೊಳಕಾಗಿದೆ ಆದರೆ ನನಗೆ ಯಾವುದೇ ರೋಗವಿಲ್ಲ. ನಾನು ಸಂತೋಷವಾಗಿದ್ದೇನೆ. ಒಳ್ಳೆಯ ಜೀವನವನ್ನು ನಡೆಸುತ್ತೇದ್ದೇನೆ ಎಂದು ಅಮೌ ಹಜಿ ಹೇಳುತ್ತಾರೆ.