ಬೆಂಗಳೂರು: ಚಾಕೊಲೇಟ್ (Chocolate) ಆಸೆ ತೋರಿಸಿ ಮೂವರು ಅಪ್ರಾಪ್ತೆಯರ ಮೇಲೆ ಲೈಂಗಿಕ ಕಿರುಕುಳ (Sexual Harassment) ಆರೋಪದಡಿ 64 ವರ್ಷದ ವೃದ್ಧನನ್ನು (Old Man) ಆನೇಕಲ್ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ಪೊಲೀಸ್ (Anekal Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೋಷಕರು ಬೆಳಗ್ಗೆ 8:30ಕ್ಕೆ ಮಕ್ಕಳನ್ನು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. 10 ಗಂಟೆಗೆ ಶಾಲೆ ಆರಂಭವಾದರೂ ಬಾಲಕಿಯರು ಎಂಟೂವರೆಗೆ ಬರುತ್ತಿದ್ದನ್ನು ಮನಗಂಡ ವೃದ್ಧ ಮಕ್ಕಳಿಗೆ ಚಾಕೋಲೆಟ್ ಆಸೆ ತೋರಿಸಿ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಇದನ್ನೂ ಓದಿ: ರಣರಂಗವನ್ನ ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ವಿರೋಧಿಗಳ ವಿರುದ್ಧ ಸಿಎಂ ಸಮರ
ಶುಕ್ರವಾರ ಎರಡನೇ ತರಗತಿಯ ಬಾಲಕಿಗೆ ವೃದ್ಧ ಲೈಂಗಿಕ ಕಿರುಕುಳ ಕೊಟ್ಟಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದರು. ವಿಚಾರಣೆ ಮಾಡಿದ ವೇಳೆ ಮೂರು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆನೇಕಲ್ ಪೋಲಿಸ್ ಠಾಣೆಯಲ್ಲಿ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿಯ ಕೆಂಪು ಕೋಟೆ, ಪ್ರಮುಖ ಧಾರ್ಮಿಕ ಸ್ಥಳಗಳ ಸ್ಫೋಟಕ್ಕೆ ಎಲ್‌ಇಟಿ ಸಂಚು

