Connect with us

Corona

ಕೊರೊನಾದಿಂದ ಗುಣಮುಖವಾಗಿ 63 ವರ್ಷದ ವೃದ್ಧ ಆಸ್ಪತ್ರೆಯಿಂದ ಡಿಸ್ಚಾರ್ಜ್

Published

on

ಧಾರವಾಡ: ಕೋವಿಡ್-19ರಿಂದ ಗುಣಮುಖರಾಗಿರುವ 63 ವರ್ಷದ ವೃದ್ಧ ರೋಗಿ-363 ಅವರನ್ನು ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಸ್ಮಶಾನ ಕಾಯುತಿದ್ದ ರೋಗಿ-363 ಅವರಿಗೆ ದೆಹಲಿಗೆ ಹೋಗಿ ಬಂದಿದ್ದ ವ್ಯಾಪಾರಿಯಿಂದ ಕೊರೊನಾ ತಗುಲಿತ್ತು. ಹುಬ್ಬಳ್ಳಿ ಕರಾಡಿ ಓಣಿಯ ನಿವಾಸಿಯಾಗಿರುವ ರೋಗಿ-363 ಅವರು ಸೋಂಕಿನಿಂದ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ನೆಗೆಟಿವ್ ವರದಿ ಬಂದಿದೆ. ಎಕ್ಸ್-ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದರಿಂದ ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 7 ಮಂದಿ ಕೋವಿಡ್-19ರಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯ 5 ಮಂದಿ ಹಾಗೂ ಬಾಗಲಕೋಟೆ ಜಿಲ್ಲೆ ಬದಾಮಿಯ ಒಬ್ಬರು ಸೋಂಕಿತರು ಕಿಮ್ಸ್ ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *