ಬೆಂಗಳೂರು: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು (New Criminal Laws) ಜಾರಿಯಾಗಿದೆ. ಭಾರತೀಯ ದಂಡ ಸಂಹಿತೆಯು (IPC) ಭಾರತೀಯ ನ್ಯಾಯ ಸಂಹಿತೆಯಾಗಿ (BSN), ಅಪರಾಧ ಪ್ರಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಜಾರಿಗೆ ಬಂದಿದೆ. ಹೊಸ ಕಾನೂನು ಜಾರಿಯಾದ ಮೊದಲ ದಿನವೇ ರಾಜ್ಯಾದ್ಯಂತ 63 ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ (Police department) ಮಾಹಿತಿ ನೀಡಿದೆ.
ಭಾರತೀಯ ನ್ಯಾಯ ಸಂಹಿತೆ ಕಾನೂನು ಅಡಿಯಲ್ಲಿ ಸೋಮವಾರ (ಜು.1) ಒಂದೇ ದಿನ ರಾತ್ರಿ 8 ಗಂಟೆ ವರೆಗೆ 63 ಎಫ್‌ಐಆರ್ (FIR) ದಾಖಲಾಗಿದೆ ಎಂದು ಮಾಹಿತಿ ನೀಡಿದೆ.
Advertisement
Advertisement
ಬ್ರಿಟಿಷ್ ಕಾಲದ ಕಾನೂನಿಗೆ ಗುಡ್‌ಬೈ:
ಹೊಸ ಕ್ರಿಮಿನಲ್ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತರುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆ. ಹೊಸ ಕಾನೂನು ಪ್ರಯೋಗಕ್ಕೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇನ್ಪೆಕ್ಟರ್‌ಗಳಿಗೆ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹಾಗೂ ಹಿರಿಯ ವಕೀಲರಿಂದ ತರಬೇತಿ ಕೊಡಿಸಲಾಗಿದೆ. ಸಿವಿಲ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆದ್ಯತೆ ಮೇರೆಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ 126 ವರ್ಷಗಳ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಲ್ಲಿ 20 ಹೊಸ ಅಪರಾಧಗಳ ಸೇರ್ಪಡೆಯಾಗಿದೆ. 33 ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. 83 ಅಪರಾಧಗಳಿಗೆ ಅಧಿಕ ದಂಡ ವಿಧಿಸುವ ಜೊತೆಗೆ 23 ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
ಪ್ರಮುಖ ಸೆಕ್ಷನ್‌ಗಳು ಯಾವುವು?
420 – ಹಣಕಾಸು ಅಥವಾ ಬೇರೆ ಯಾವುದೇ ಆಮಿಷ ಒಡ್ಡಿ ವಂಚಿಸಿದ ಆರೋಪದ ಅಡಿ ಐಪಿಸಿ ಸೆಕ್ಷನ್ 420ರ ಅಡಿ ಕೇಸ್ ದಾಖಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್ 318 ಆಗಿದೆ.
302 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಪ್ರಕರಣಕ್ಕೆ ಈ ಸೆಕ್ಷನ್ ಬಳಸಲಾಗುತ್ತಿತ್ತು. ಇದೀಗ ಭಾರತೀಯ ನ್ಯಾಯ ಸಂಹಿತೆಯಲ್ಲಿ 103 ಆಗಿದೆ.
307 – ಭಾರತೀಯ ದಂಡ ಸಂಹಿತೆಯಲ್ಲಿ ಕೊಲೆ ಯತ್ನಕ್ಕೆ ಬಳಸಲಾಗುತ್ತಿತ್ತು. ಇದೀಗ ಸೆಕ್ಷನ್ 103 ಆಗಿದೆ.
376 – ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರ ಪ್ರಕಣಗಳಿಗೆ ಈ ಸೆಕ್ಷನ್ ಬಲಸಲಾಗುತ್ತಿತ್ತು. ಇದೀಗ 64 ಆಗಿದೆ.
304(ಬಿ) – ಐಪಿಸಿ ನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಬಳಸುತ್ತಿದ್ದ ಸೆಕ್ಷನ್ ಈಗ ಬಿಎನ್‌ಎಸ್‌ನಲ್ಲಿ 80 ಆಗಿದೆ.
304(ಎ) – ಐಪಿಸಿ ನಲ್ಲಿ ನಿರ್ಲಕ್ಷ್ಯದಿಂದ ಮರಣ (ರಸ್ತೆ ಅಪಘಾತ ಅಥವಾ ಇತರೇ ಸಂದರ್ಭ) ವೇಳೆ ಬಳಸಲಾಗುತ್ತಿತ್ತು. ಇದೀಗ ಬಿಎನ್‌ಎಸ್‌ನಲ್ಲಿ 106 ಆಗಿದೆ.
359 – ವ್ಯಕ್ತಿ ಅಪಹರಣ ಪ್ರಕರಣದಲ್ಲಿ ಐಪಿಸಿ ನಲ್ಲಿ ಈ ಸೆಕ್ಷನ್ ಬಳಕೆಯಾಗುತ್ತಿತ್ತು. ಈಗ ಸೆಕ್ಷನ್ 137 ಆಗಿದೆ.
309 – ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದರೆ ಆತನ ವಿರುದ್ಧ ಐಪಿಸಿ ಅಡಿ ಈ ಸೆಕ್ಷನ್ ವಿಧಿಸಲಾಗುತ್ತಿತ್ತು. ಈಗ ಬಿಎನ್‌ಎಸ್ ಅಡಿ 226 ಆಗಿದೆ.