ಶ್ರೀನಗರ: ವೃದ್ಧಾಪ್ಯ ವೇತನ (Old Age Pension) ಪಡೆಯಲು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದಾಗ 62 ವರ್ಷದ ವೃದ್ಧ ಸಾವಿಗೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ.
ಬಂಡಿಪೋರಾದ ಮಲಂಗಮ್ ನಿವಾಸಿ ಸೋನಾವುಲ್ಲಾ ಭಟ್ ಅವರು ಮಂಗಳವಾರ ಬೆಳಗ್ಗೆ ತಹಸಿಲ್ ಸಮಾಜ ಕಲ್ಯಾಣ ಕಚೇರಿಯಲ್ಲಿ ತಮ್ಮ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ – 33 ಲಕ್ಷ ಚಂದಾದಾರರಿದ್ದ 3 ಯೂಟ್ಯೂಬ್ ಚಾನೆಲ್ ಪತ್ತೆ
Advertisement
Advertisement
ಪಾವತಿ ಪ್ರಕ್ರಿಯೆಯನ್ನು ಆನ್‌ಲೈನ್ ಮೋಡ್‌ಗೆ ವರ್ಗಾಯಿಸಿರುವುದರಿಂದ ಕಾಶ್ಮೀರದಲ್ಲಿ ಸಾವಿರಾರು ವೃದ್ಧಾಪ್ಯ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಕ್ರಮಬದ್ಧಗೊಳಿಸುವುದಕ್ಕಾಗಿ ಹಲವು ತಿಂಗಳುಗಳಿಂದ ಮನೆಯಿಂದ ಕಚೇರಿಗೆ ಅಲೆಯುವಂತಾಗಿದೆ. ವೃದ್ಧರ ವಿಚಾರದಲ್ಲಿ ಮಾನವೀಯ ಧೋರಣೆ ಅಳವಡಿಸಿಕೊಳ್ಳುವಂತೆ ಆಡಳಿತ ಪಕ್ಷವನ್ನು ವಿಪಕ್ಷಗಳು ಒತ್ತಾಯಿಸಿವೆ.
Advertisement
ಭಟ್ ಅವರ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಪಿಐ(ಎಂ) ಮುಖಂಡ ಮೊಹಮದ್ ಯೂಸುಫ್ ತರಿಗಾಮಿ, ಇಡೀ ಪ್ರಕ್ರಿಯೆಯನ್ನು ಸರಳಗೊಳಿಸುವ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ
Advertisement
ವಿಕಲಚೇತನರು ಸೇರಿದಂತೆ ವೃದ್ಧಾಪ್ಯದಲ್ಲಿರುವ ಫಲಾನುಭವಿಗಳನ್ನು ಕಚೇರಿಗಳ ಹೊರಗೆ ಗಂಟೆಗಳ ಕಾಲ ಉದ್ದನೆಯ ಸರತಿ ಸಾಲಿನಲ್ಲಿ ಕಾಯುವಂತೆ ಮಾಡಲಾಗುತ್ತಿದೆ. ಇದು ಈ ಬಡ ವೃದ್ಧರೊಬ್ಬರ ದುರದೃಷ್ಟಕರ ಸಾವಿಗೆ ಕಾರಣವಾಯಿತು.