– ಆಕಸ್ಮಿಕವಾಗಿ ಫೇಸ್‍ಬುಕ್ ಮೂಲಕ ಪರಿಚಯ, ಸ್ನೇಹ
– ಮೂವರು ಗಂಡಂದಿರನ್ನ ಕಳ್ಕೊಂಡಿರೋ ಅಜ್ಜಿ
ಟುನಿಸ್: 62 ವರ್ಷದ ಅಜ್ಜಿಯೊಬ್ಬರು ತನಗಿಂತ ಕಿರಿಯ 26 ವರ್ಷದ ಯುವಕನ ಜೊತೆ ಮದುವೆಯಾಗಿರುವ ಘಟನೆ ಉತ್ತರ ಆಫ್ರಿಕಾದಲ್ಲಿ ನಡೆದಿದೆ.
62 ವರ್ಷದ ಇಸಾಬೆಲ್ ಡಿಬಲ್ ಮತ್ತು 26 ವರ್ಷದ ಬೇರಾಮ್ ಬೌಸಾಡಾ ಮದುವೆಯಾಗಿದ್ದಾರೆ. ಇಸಾಬೆಲ್ ಡಿಬಲ್ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ವಿಮಾನ ನಿಲ್ದಾಣದ ಬರಿಸ್ತಾ ಕಾಫಿ ಸೆಂಟರ್ ಗಾಗಿ ಆನ್‍ಲೈನ್‍ನಲ್ಲಿ ಹುಡುಕುತ್ತಿದ್ದರು. ಇದೇ ವೇಳೆ ಬೇರಾಮ್ ಪರಿಚಯವಾಗಿದ್ದು ಆತ ಬರಿಸ್ತಾಕ್ಕೆ ಕರೆದಿದ್ದ. ಆದರೆ ಅಜ್ಜಿ ಆತನ ಮನವಿಯನ್ನು ನಿರಾಕರಿಸಿದ್ದರು.
Advertisement
Advertisement
ಕೆಲವು ತಿಂಗಳ ಬಳಿಕ ಇಸಾಬೆಲ್ ಡಿಬಲ್ ತಾನು ಮಾಡಿದ್ದು ತಪ್ಪು ಎಂದು ಬೇರಾಮ್‍ಗೆ ಫೇಸ್‍ಬುಕ್‍ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಆದರೆ ಅದು ಬೇರಾಮ್ ಬೌಸಾಡಾಗೆ ಹೋಗಿದೆ. ಆಗ ಬೇರಾಮ್ ಅಜ್ಜಿಯ ಮನವಿಯನ್ನು ಸ್ವೀಕರಿಸಿ ಇಬ್ಬರು ಸ್ನೇಹಿತರಾಗಿದ್ದರು. ದಿನ ಕಳೆದಂತೆ ಇಬ್ಬರು ಮೆಸೇಜ್ ಮಾಡುತ್ತಿದ್ದು, ವಿಡಿಯೋ ಕಾಲ್ ಮಾಡುವ ಮೂಲಕ ಮಾತನಾಡುತ್ತಿದ್ದರು.
Advertisement
ಕೊನೆಗೆ ಇಬ್ಬರು ಭೇಟಿಯಾಗಿ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವ ನಿರ್ಧಾರವನ್ನು ಮಾಡಿದ್ದಾರೆ. ಅದರಂತೆಯೇ ಜನವರಿಯಲ್ಲಿ ಟುನೀಶಿಯಾದಲ್ಲಿ ವಿವಾಹವಾದರು. ಈಗಾಗಲೇ ಇಸಾಬೆಲ್ ಡಿಬಲ್ ಮೂವರು ಗಂಡಂದಿರನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದಾರೆ.
Advertisement
ಮೊದಲಿಗೆ ಇಬ್ಬರ ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಇಸಾಬೆಲ್ ಮಕ್ಕಳು ಕೂಡ ಈ ವಯಸ್ಸಿನಲ್ಲಿ ಮದುವೆ ಬೇಡ ಎಂದು ಬೇಸರ ವ್ಯಕ್ತಪಡಿಸಿದ್ದರು. ಕೊನೆಗೆ ಎರಡು ಕುಟುಂಬದವರು ಒಪ್ಪಿ ಮದುವೆ ಮಾಡಿದ್ದಾರೆ. ಈಗಾಗಲೇ ಈ ಜೋಡಿ ಹನಿಮೂನ್ ಕೂಡ ಮುಗಿಸಿದ್ದಾರೆ. ಬೇರಾಮ್ ತಮ್ಮ ಪತ್ನಿಯನ್ನು ಪ್ರೀತಿಯಿಂದ ‘ನನ್ನ ಆತ್ಮ’ ಎಂದು ಕರೆಯುತ್ತಾರೆ.
ಈ ಬಗ್ಗೆ ಮಾತನಾಡಿದ ಇಸಾಬೆಲ್, ನಮ್ಮಿಬ್ಬರ ನಡುವೆ ವಯಸ್ಸಿನ ಅಂತರ ತುಂಬಾ ಇದೆ ಅಂತ ನನಗೆ ಗೊತ್ತು. ಆದರೆ ನಮ್ಮ ವಯಸ್ಸು ಮನಸ್ಸಿನ ಪ್ರೀತಿಗೆ ಅಡ್ಡಿಯಾಗುವುದಿಲ್ಲ. ನನ್ನ ಪತಿ ಬೇರಾಮ್‍ಗೂ ಈ ಬಗ್ಗೆ ಚಿಂತೆಯಿಲ್ಲ. ಈಗ ನಾನು ಬೇರಾಮ್ ಪ್ರೀತಿಯ ನೆರಳಿನಲ್ಲಿದ್ದೇನೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.
ಇಸಾಬೆಲ್ ಈಗಾಗಲೇ ಮೂವರ ಪತಿಯರನ್ನು ಕಳೆದುಕೊಂಡಿದ್ದ ನೋವಿನಲ್ಲಿದ್ದಾರೆ. ಇಂತಹ ಮಹಿಳೆಯರ ಬಗ್ಗೆ ನಾನು ಓದಿ ತಿಳಿದುಕೊಂಡಿದ್ದೇನೆ. ಅವರಿಗೆ ಪ್ರೀತಿಯ ಆಸರೆ ಬೇಕಾಗುತ್ತದೆ. ಹೀಗಾಗಿ ನಾನು ಇಸಾಬೆಲ್ ಜೊತೆ ಮದುವೆಯಾಗಿದ್ದೇನೆ. ಆದರೆ ಆಕೆಯ ಹಣ, ಆಸ್ತಿ ಯಾವುದರ ಮೇಲೂ ನನಗೆ ಇಷ್ಟ ಇಲ್ಲ. ಪ್ರೀತಿಯಿಂದ ವಿವಾಹವಾಗಿರುವುದಾಗಿ ಬೇರಾಮ್ ಹೇಳಿದ್ದಾರೆ.