ಹೈದರಾಬಾದ್: ಗಣೇಶ ಹಬ್ಬ (Ganesha Festival) ಮುಗಿದ ಬಳಿಕವೂ ಶ್ರೀಗಣಪತಿ ದೇವಸ್ಥಾನಗಳಲ್ಲಿ (Laksmi Ganapathy) ಪ್ರಸಾದಕ್ಕೆ (Prasad) ಭಾರೀ ಬೇಡಿಕೆ ಶುರುವಾಗಿದೆ. ನೆಚ್ಚಿನ ವಿಘ್ನೇಶ್ವರನಿಗಾಗಿ ಸಿದ್ಧಪಡಿಸಿದ ನೈವೇದ್ಯ ಪ್ರಸಾದ ದಾಖಲೆಯ ಹರಾಜಿಗೆ ಮಾರಾಟವಾಗುತ್ತಿವೆ. ಹಾಗೆಯೇ ಇಲ್ಲಿನ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾಸನ್ ಸಿಟಿಯಲ್ಲಿ 10 ರಿಂದ 12 ಕೆಜಿ ತೂಕದ ಲಡ್ಡು (Ladoo) ಬರೋಬ್ಬರಿ 60.8 ಲಕ್ಷ ರೂ.ಗೆ ಹರಾಜಾಗಿದೆ.
Advertisement
ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಳಾಪುರದ ಗಣೇಶ ದೇವಸ್ಥಾನದಲ್ಲಿ 24.60 ಲಕ್ಷಕ್ಕೆ ಲಡ್ಡು ಹರಾಜಾಗಿತ್ತು. ನಿನ್ನೆಯೂ ಸಹ ಇದೇ ಶ್ರೀಲಕ್ಷ್ಮೀ ಗಣಪತಿ (Laksmi Ganapathy) ದೇವಸ್ಥಾನದಲ್ಲಿ (Temple) 12 ಕೆಜಿ ಲಡ್ಡು 45 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಇಂದು ಅಷ್ಟೇ ತೂಕದ ಲಡ್ಡು ಬರೋಬ್ಬರಿ 60.8 ಲಕ್ಷಕ್ಕೆ ಹರಾಜಾಗಿ ದಾಖಲೆ ನಿರ್ಮಿಸಿದೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಗೆದ್ದರೆ ಮನೆ ಬಾಗಿಲಿಗೇ RTO ಸೇವೆ – ಕೇಜ್ರಿವಾಲ್
Advertisement
ಹಿಂದೂ, ಮುಸ್ಲಿಂ, ಕ್ರೈಸ್ತರು ಹಾಗೂ ಸಿಖ್ಖರು ಸೇರಿದಂತೆ ಸುಮಾರು 100 ಮಂದಿ ಒಟ್ಟಾಗಿ ಸೇರಿ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಪ್ರಸಾದವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.
Advertisement
Advertisement
ಗಣೇಶನಿಗೆ ಮಾಡಿದ ಲಡ್ಡೂಗಳನ್ನು ಪ್ರಸಾದವಾಗಿ ಹರಾಜು ಹಾಕುವುದು ಇಲ್ಲಿನ ಸಂಪ್ರದಾಯವಾಗಿದೆ. ಅಲ್ಲದೇ ಲಡ್ಡು ಪಡೆದವರು ದೇವರ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ ಎಂದು ನಂಬಲಾಗಿದೆ. ಲಡ್ಡು ಅವರಿಗೆ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನೂ ಶ್ರೀಗಣೇಶ ಕರುಣಿಸುತ್ತಾರೆ ಎಂದು ಜನರ ನಂಬಿಕೆಯಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್ ಹೇಳಿದ್ದೇನು?
This #GaneshLaddoo is probably the most expensive in the world !! It was sold for Rs 60.8 lakh in #Hyderabad as part of a unique auction where instead of competing individually, everyone's '#LadduPrice' is taken cumulatively & used for charity @ndtv @ndtvindia #LadduForRs60lakh pic.twitter.com/14QnmI4zIw
— Uma Sudhir (@umasudhir) September 12, 2022
ಹರಾಜಿನಿಂದ ಬಂದ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.