ಇಂದು 606 ಕೇಸ್ – 6 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

Advertisements

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Corona) ಪ್ರಕರಣಗಳ ಏರಿಳಿತ ಮುಂದುವರಿದಿದೆ. ಇಂದು ಒಟ್ಟು 606 ಪಾಸಿಟಿವ್ ಕೇಸ್ ಮತ್ತು 2 ಮರಣ ಪ್ರಕರಣ ದಾಖಲಾಗಿದೆ.

Advertisements

ರಾಜ್ಯದಲ್ಲಿ 6 ಜಿಲ್ಲೆಗಳಾದ ಬೆಂಗಳೂರು ನಗರ, ಬೀದರ್, ಗದಗ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇಂದು ರಾಜ್ಯದಲ್ಲಿ 451 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,726ಕ್ಕೆ ಇಳಿಕೆ ಕಂಡಿದೆ. ಜೊತೆಗೆ ಬೆಂಗಳೂರು ನಗರದಲ್ಲೂ ಪ್ರಕರಣಗಳ ಸಂಖ್ಯೆ ಭಾರಿ ಇಳಿಕೆ ಕಂಡಿದೆ. ಇಂದು 289 ಕೇಸ್ ದಾಖಲಾಗಿದೆ. ಹಾಸನದಲ್ಲಿ ದಾಖಲಾದ 48 ಕೇಸ್ ಜಿಲ್ಲೆಗಳ ಪೈಕಿ ದಾಖಲಾದ ಹೆಚ್ಚಿನ ಪ್ರಕರಣವಾಗಿದೆ. ಇಂದು ಶಿವಮೊಗ್ಗ ಮತ್ತು ತುಮಕೂರಿನಲ್ಲಿ ತಲಾ ಒಂದೊಂದು ಮರಣ ಪ್ರಕರಣ ದಾಖಲಾಗಿದೆ. ಈ ಮೂಲಕ ಈವರೆಗೆ ಒಟ್ಟು 40,211 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಹಾವಳಿ – ಕಾಣೆಯಾಗಿದ್ದಾರೆಂದು ಸಚಿವರು, ಸಂಸದರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

Advertisements

ಈವರೆಗೆ ರಾಜ್ಯದಲ್ಲಿ ಒಟ್ಟು 40,56,428 ಮಂದಿಗೆ ಕೊರೊನಾ ಬಂದಿದೆ. ಒಟ್ಟು 40,11,449 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 1,30,105 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 23,647 ಸ್ಯಾಂಪಲ್ (ಆರ್‌ಟಿಪಿಸಿಆರ್ 17,893 + 5,754 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಹಿಜಬ್ ಪ್ರಕರಣ: ಶಾಲಾ ವಿದ್ಯಾರ್ಥಿಗಳನ್ನು ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ – ಸುಪ್ರೀಂಕೋರ್ಟ್‌ನಲ್ಲಿ 2 ಗಂಟೆ ಮಹತ್ವದ ವಿಚಾರಣೆ

Advertisements

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 3, ಬಳ್ಳಾರಿ 14, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 289, ಬೀದರ್ 0, ಚಾಮರಾಜನಗರ 10, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 11, ಚಿತ್ರದುರ್ಗ 1, ದಕ್ಷಿಣ ಕನ್ನಡ 15, ದಾವಣಗೆರೆ 3, ಧಾರವಾಡ 15, ಗದಗ 0, ಹಾಸನ 48, ಹಾವೇರಿ 2, ಕಲಬುರಗಿ 5, ಕೊಡಗು 35, ಕೋಲಾರ 16, ಕೊಪ್ಪಳ 0, ಮಂಡ್ಯ 7, ಮೈಸೂರು 34, ರಾಯಚೂರು 8, ರಾಮನಗರ 28, ಶಿವಮೊಗ್ಗ 16, ತುಮಕೂರು 10, ಉಡುಪಿ 8, ಉತ್ತರ ಕನ್ನಡ 12, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

Live Tv

Advertisements
Exit mobile version