– ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,229ಕ್ಕೆ ಏರಿಕೆ
– ಕೇಂದ್ರ ಸರ್ಕಾರದಿಂದ ಮಾಹಿತಿ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,229ಕ್ಕೆ ಏರಿದೆ. ಶುಕ್ರವಾರ ಒಂದೇ ದಿನಕ್ಕೆ 601 ಹೊಸ ಪ್ರಕರಣ ಭಾರತದಲ್ಲಿ ವರದಿಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ದೇಶದಲ್ಲಿ ಮಹಾಮಾರಿ ಕೊರೊನಾಗೆ ಈವರೆಗೆ 87 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈವರೆಗೆ ಭಾರತದಲ್ಲಿ 230 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ವಿಶ್ವಾದ್ಯಂತ 11,32,733 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 2,35,992 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 60,353 ಮಂದಿ ಮಹಾಮಾರಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
Advertisement
#WATCH Live from Delhi – Union Ministry of Health & Family Welfare briefing on #COVID19 situation. (4th April 2020) https://t.co/mw4OmHyyEF
— ANI (@ANI) April 4, 2020
Advertisement
ಭಾರತದಲ್ಲಿ ವರದಿಯಾಗಿರುವ ಕೋವಿಡ್-18 ಸೋಂಕಿತರಲ್ಲಿ ಸುಮಾರು 1,023 ಮಂದಿ ದೆಹಲಿ ಸಮಾವೇಶದಲ್ಲಿ ಭಾಗಿಯಾದವರಾಗಿದ್ದಾರೆ. ದೇಶದಲ್ಲಿ ಈವರೆಗೆ ಹೆಚ್ಚು ಕೊರೊನಾ ಸೊಂಕಿತ ಪ್ರಕರಣ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಅಲ್ಲಿ 537 ಮಂದಿಗೆ ಸೋಂಕು ತಗುಲಿದ್ದು, 26 ಮಂದಿ ಮೃತಪಟ್ಟಿದ್ದಾರೆ. ಇತ್ತ ಎರಡನೇ ಸ್ಥಾನದಲ್ಲಿ ತಮಿಳು ನಾಡಿದ್ದು, ಇಲ್ಲಿ 411 ಮಂದಿಗೆ ಸೋಂಕು ತಟ್ಟಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ದೆಹಲಿಯಲ್ಲಿ 386 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 6 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಕೇರಳದಲ್ಲಿ 295 ಮಂದಿ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಕರ್ನಾಟಕದಲ್ಲಿ 128 ಮಂದಿಗೆ ಸೊಂಕು ತಗುಲಿದ್ದು, 11 ಮಂದಿ ಗುಣಮುಖರಾಗಿದ್ದರೆ, 4 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Till now there are 2,902 #COVID19 positive cases in India. 601 positive cases have been reported since yesterday, 12 deaths also reported yesterday taking total deaths to 68. 183 people have recovered/discharged: Lav Aggarwal, Joint Secretary, Health Ministry pic.twitter.com/v1jxcj3hrz
— ANI (@ANI) April 4, 2020
Advertisement
ರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದ 17 ರಾಜ್ಯಗಳಿಂದ ವರದಿಯಾಗಿರುವ ಕೊರೊನಾ ವೈರಸ್ ಪ್ರಕರಣಗಳಲ್ಲಿ 1023 ಪ್ರಕರಣಗಳಿಗೆ ತಬ್ಲಿಘಿ ಜಮಾತ್‍ಗೆ ನಂಟಿದೆ. ದೇಶದಲ್ಲಿ ದಾಖಲಾದ ಪ್ರಕರಣದಲ್ಲಿ ಶೇ.30ರಷ್ಟು ಪ್ರಕರಣ ಒಂದೇ ಪ್ರದೇಶಕ್ಕೆ ಸಂಬಂಧಿಸಿದಾಗಿದೆ ಎಂದು ಸಚಿವಾಲಯ ತಿಳಿಸಿದೆ.
Nine per cent #COVID19 patients belong to 0-20 years age, 42 per cent patients belong to 21-40 years age, 33 per cent cases pertain to patients between 41-60 years age, & 17 per cent patients have crossed 60 years age: Lav Aggrawal, Joint Secretary, Union Health Ministry pic.twitter.com/FMhiLUaeXm
— ANI (@ANI) April 4, 2020
ಸೋಂಕಿತರಲ್ಲಿ ಶೇ. 9ರಷ್ಟು ರೋಗಿಗಳು 0-20 ವರ್ಷದವರಾಗಿದ್ದಾರೆ, ಶೇ. 42ರಷ್ಟು ಮಂದಿ 21-40 ವರ್ಷದವರು, ಶೇ. 33ರಷ್ಟು ಮಂದಿ 41-60 ವರ್ಷದವರು, ಉಳಿದ ಶೇ. 17ರಷ್ಟು ಮಂದಿ 60 ವರ್ಷ ಮೆಲ್ಪಟ್ಟವರು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.