ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ

Public TV
1 Min Read
Nitin Gadkari

ನವದೆಹಲಿ: ದೇಶಕ್ಕೆ ಇನ್ನೂ ಕನಿಷ್ಠ 600 ವೈದ್ಯಕೀಯ ಕಾಲೇಜುಗಳು ದೆಹಲಿಯ ಏಮ್ಸ್ ತರಹದ 50 ಸಂಸ್ಥೆಗಳು ಮತ್ತು 200 ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳು ಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ್ ನಗರದಲ್ಲಿ ಕೊರೊನಾ ವಾರಿಯರ್ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ವಲಯದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಗತ್ಯ ಇದೆ. ಸಹಕಾರಿ ಕ್ಷೇತ್ರ ಸಹ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲು ಮುಂದೆ ಬರಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸೋಮವಾರ ಬಂದ್ ಇದ್ದರೂ SSLC ಪೂರಕ ಪರೀಕ್ಷೆ

Nitin Gadkari

ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಚರ್ಚೆಯ ಸಮಯದಲ್ಲಿ, ನಾನು ಅವರಿಗೆ ವೆಂಟಿಲೇಟರ್‍ಗಳ ಕೊರತೆಯ ಬಗ್ಗೆ ಹೇಳಿದೆ. ದೇಶದಲ್ಲಿ ಎಷ್ಟು ವೆಂಟಿಲೇಟರ್‍ಗಳಿವೆ ಎಂದು ಅವರು ನನ್ನನ್ನು ಕೇಳಿದರು, ಅದಕ್ಕೆ ನಾನು ಸುಮಾರು 2.5 ಲಕ್ಷ ಇರಬೇಕು. ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ ದೇಶದಲ್ಲಿ ಕೇವಲ 13,000 ವೆಂಟಿಲೇಟರ್‍ಗಳು ಇದ್ದವು ಎಂದು ಅವರು ನನಗೆ ತಿಳಿಸಿದರು ಎಂದು ಗಡ್ಕರಿ ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದುಬಾರಿ ಶುಲ್ಕ- ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ಚಿಂತನ ಮಂಥನ

Nitin Gadkari MODI

ಆ ಸಮಯದಲ್ಲಿ ಆಮ್ಲಜನಕ, ಬೆಡ್‍ಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ತು. ಆದರೆ ವೈದ್ಯರು, ಅರೆವೈದ್ಯರು, ನರ್ಸ್‍ಗಳು ಆ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದರು. ಅವರ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *