ಜೈಪುರ: ಜನವರಿಯಲ್ಲಿ ನಡೆಯಲಿರುವ ಅಯೋಧ್ಯೆ ರಾಮಮಂದಿರದ (Ayodhya Ram Mandir) ಲೋಕಾರ್ಪಣೆಗೆ ಭರದ ಸಿದ್ದತೆಗಳು ನಡೆದಿವೆ. ರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗಾಗಿ ರಾಜಸ್ಥಾನದ ಜೋಧ್‌ಪುರದಿಂದ (Jodhpur) 600 ಕೆಜಿಯಷ್ಟು ಪರಿಶುದ್ಧ ತುಪ್ಪವನ್ನು (Ghee) ಅಯೋಧ್ಯೆಗೆ ಕಳಿಸಲಾಗಿದೆ.
ಈ ತುಪ್ಪವನ್ನು ವಿಶೇಷವಾಗಿ ತಯಾರಿಸಲಾದ 108 ಕಲಶಗಳಲ್ಲಿ 11 ರಥಗಳ ಮೂಲಕ ಅಯೋಧ್ಯೆಗೆ ಮಂತ್ರಘೋಷಗಳ ಮೂಲಕ ಕಳುಹಿಸಿಕೊಡಲಾಗಿದೆ. ಸಾಂದೀಪನಿ ರಾಮಧರ್ಮ ಗೋಶಾಲೆ ಈ ತುಪ್ಪವನ್ನು ಕಳುಹಿಸಿಕೊಟ್ಟಿದೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ
Advertisement
ಪ್ರಾಣ ಪ್ರತಿಷ್ಠೆಯ ಸಮಯದಲ್ಲಿ ನಡೆಸಲಾಗುವ ಮಹಾಯಜ್ಞ ಮತ್ತು ಆರತಿಗಾಗಿ ವಿಶೇಷ ತುಪ್ಪವನ್ನು ಬಳಸಲಾಗುತ್ತದೆ. ಗೋಶಾಲೆಯಲ್ಲಿರುವ ದೇಸಿ ಹಸುವಿನಿಂದ ಈ ತುಪ್ಪವನ್ನು ತಯಾರಿಸಲಾಗಿದೆ.
Advertisement
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾರ್ಚ್ 10 ರವರೆಗೆ 48 ದಿನಗಳ ಕಾಲ ನಡೆಯಲಿದ್ದು, ಜನವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜ.22 ರಂದು ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
Advertisement