ಮೆಲ್ಬರ್ನ್: 8 ವರ್ಷಗಳ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ, 600 ಕೆಜಿ ತೂಕದ ಮೊಸಳೆಯೊಂದು ಆಸ್ಟ್ರೇಲಿಯಾದ ಕ್ಯಾಥರಿನ್ ನದಿಯಲ್ಲಿ ಸೆರೆ ಸಿಕ್ಕಿದೆ.
2010 ರಿಂದಲೂ ರೆಂಜ್ ಆಫಿಸರ್ ಗಳು ಕ್ಯಾಥರಿನ್ ನದಿಯಲ್ಲಿ ವಾರ್ಷಿಕವಾಗಿ ಸುಮಾರು 250 ಮೊಸಳೆಗಳನ್ನು ಬಲೆ ಹಾಕಿ ಹಿಡಿಯಲಾಗುತ್ತಿದೆ. ಮೊಸಳೆಗಳು ಜನರನ್ನು ಬಲಿ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇವುಗಳನ್ನು ಹಿಡಿಯಲಾಗುತ್ತಿದೆ. ಈ ವರ್ಷದಲ್ಲೇ ಒಟ್ಟು 188 ಉಪ್ಪು ನೀರಿನ ಮೊಸಳೆಗಳನ್ನು ಸೆರೆ ಹಿಡಿಯಲಾಗಿದೆ.
ಇವುಗಳಲ್ಲಿ ಸದ್ಯ ಸೆರೆ ಸಿಕ್ಕಿರುವ ಮೊಸಳೆಯು ಅತ್ಯಂತ ದೊಡ್ಡ ಗಾತ್ರದ ಹಾಗೂ ತೂಕದ ಮೊಸಳೆಯಾಗಿದೆ. ಇದು 60 ವರ್ಷದ ಮೊಸಳೆಯಾಗಿದ್ದು, ಬರೋಬ್ಬರಿ 600 ಕೆಜಿ ತೂಕ ಹೊಂದಿದ್ದು, 4.7 ಮೀಟರ್ ಉದ್ದವಿದೆ. ಇದು ಎರಡು ವಾರಗಳ ಹಿಂದೆಯೇ ಹಾಕಿದ್ದ ಬಲೆಗೆ ಸಿಕ್ಕಿ ಬಿದ್ದಿದ್ದು, ದೈತ್ಯ ಗಾತ್ರದ ಹೊಂದಿರುವದರಿಂದ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲಾಗಿದೆ.
2011 ರಲ್ಲಿ ಬಲೆಗೆ ಬಿದ್ದ ಸಾಲ್ಟಿ ಹೆಸರಿನ ಮೊಸಳೆ 4.6 ಮೀ ಉದ್ದವಿದ್ದು, ಸದ್ಯ ಇದು ಜಗತ್ತಿನ ಎರಡನೇ ದೊಡ್ಡ ಗಾತ್ರದ ಮೊಸಳೆಯಾಗಿದೆ.