ರಾಯ್ಪುರ್: 4 ವರ್ಷದ ಮೊಮ್ಮಗಳ ಮೇಲೆ 60 ವರ್ಷದ ಅಜ್ಜ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಛತ್ತಿಸ್‍ಘಡ್ ರಾಜ್ಯದ ಕೊಂದಾಗೊನ್‍ನಲ್ಲಿ ನಡೆದಿದೆ.
ಅತ್ಯಾಚಾರ ಎಸೆಗಿದ ಬಳಿಕ ಅಜ್ಜ, ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಮೊಮ್ಮಗಳು ಕಾಣೆಯಾಗಿದ್ದಾಳೆ ಎಂದು ಸುದ್ದಿ ಮಾಡಿದ್ದನು. ಕೊಲೆಯ ಬಳಿಕ ಮೊಮ್ಮಗಳ ಮೃತ ದೇಹವನ್ನು ಒಣ ಹುಲ್ಲಿನಲ್ಲಿ ಮರೆಮಾಡಿ ಮನೆ ಬಳಿಯ ಮಣ್ಣಿನ ಗುಂಡಿಗೆ ಎಸೆದಿದ್ದಾನೆ. ನಂತರ ಮೊಮ್ಮಗಳನ್ನು ಹುಡುಕುವಂತೆ ಎಲ್ಲರೆದುರು ನಾಟಕ ಮಾಡಿದ್ದಾನೆ.
ಜೂನ್ 11ರಂದು ಮಗಳು ಕಾಣೆಯಾದ ಬಳಿಕ ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಪೊಲೀಸರು ಕಾಮುಕ ಅಜ್ಜನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಜ್ಜ ಸಿಕ್ಕಿ ಬಿದ್ದಿದ್ದು ಹೇಗೆ?:
ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಬಾಲಕಿಯ ಪತ್ತೆಗಾಗಿ ಜಾಲ ಬೀಸಿದ್ದರು. ಈ ವೇಳೆ ಮನೆಯ ಪಕ್ಕದ ಕೆಸರಿನಲ್ಲಿಯೇ ಆಕೆಯ ಶವ ದೊರೆತಿದೆ. ಬಾಲಕಿಯ ಶವ ಪತ್ತೆಯಾದ್ರೂ ಪೊಲೀಸರಿಗೆ ಸ್ಥಳದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಕೊನೆಗೆ ಪೊಲೀಸರು ಶ್ವಾನದಳ ಕರೆಸಿದಾಗ ಅವುಗಳು ನೇರವಾಗಿ ಬಾಲಕಿಯ ಅಜ್ಜನ ಬಳಿಯೇ ಹೋಗಿವೆ. ಪೊಲೀಸರು ಅಜ್ಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನೇ ಅತ್ಯಾಚಾರ ಎಸಗಿ ಮೊಮ್ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್‍ಪಿ ಪಲ್ಲವ್ ಹೇಳಿದರು.
ಆರೋಪಿಯನ್ನು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಬಂಧಿಸಲಾಗಿದೆ. ಇದೇ ರೀತಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಮೊಮ್ಮಗಳ ಮೇಲೆ ಆತ್ಯಚಾರವೆಸಗಿದ್ದನು. ಈ ಘಟನೆ ನಲಸೊಪಾರದಲ್ಲಿ ನಡೆದಿದ್ದು, ಆತನನ್ನು ಬಂಧಿಸಲಾಗಿತ್ತು.