ವಿಜಯಪುರ: ಸೋಶಿಯಲ್ ಮೀಡಿಯಾದಲ್ಲಿ ಟಿಕ್‍ಟಾಕ್ ಆಪ್ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ. ಇದೇ ಟಿಕ್‍ಟಾಕ್‍ನಲ್ಲೀಗ ಇಳಿ ವಯಸ್ಸಿನ ಅಜ್ಜನೊಬ್ಬ ಭಾರೀ ಹವಾ ಎಬ್ಬಿಸಿದ್ದಾರೆ. ಟಿಕ್‍ಟಾಕ್ ಶುರು ಮಾಡಿದ ಒಂದೇ ತಿಂಗಳಲ್ಲಿ 70 ಸಾವಿರಕ್ಕೂ ಅಧಿಕ ಜನ ಫಾಲೋ ಮಾಡುತ್ತಿದ್ದಾರೆ.
ಗುಮ್ಮಟನಗರಿ ವಿಜಯಪುರದ ಇಳಿ ವಯಸ್ಸಿನ ಅಜ್ಜನೊಬ್ಬ ಟಿಕ್‍ಟಾಕ್‍ನಲ್ಲಿ ಹವಾ ಸೃಷ್ಟಿಸಿದ್ದಾರೆ. ಪ್ರಕಾಶ್ ಗಾಣಿಗೇರ್ (60) ಅಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದ ನಿವಾಸಿ. 1 ತಿಂಗಳ ಹಿಂದೆ ಪ್ರಕಾಶ್ ಗಾಣಿಗೇರ್ ಹೊಸ ಮೊಬೈಲ್ ಖರೀದಿಸಿದ್ದರು. ಓಣಿಯ ಹುಡುಗರು ಅಜ್ಜನಿಗೆ ಟಿಕ್‍ಟಾಕ್ ಆಪ್ ಹಾಕಿಕೊಟ್ಟಿದ್ದರು. ಟಿಕ್‍ಟಾಕ್ ಕಲಾವಿದರು ಮಾಡುವ ವಿಡಿಯೋಗಳನ್ನು ನೋಡಿ ಇಂಪ್ರೆಸ್ ಆಗಿದ್ದಾರೆ. ಬಳಿಕ ತಾವೇ ಟಿಕ್‍ಟಾಕ್ ಮಾಡಲು ಶುರು ಮಾಡಿದ್ದು, ಒಂದೇ ತಿಂಗಳಲ್ಲಿ 70 ಸಾವಿರಕ್ಕೂ ಹೆಚ್ಚು ಫಾಲೋವರ್ಸ್, 9 ಲಕ್ಷಕ್ಕೂ ಹೆಚ್ಚು ಲೈಕ್‍ಗಳು ಸಿಕ್ಕಿವೆ.
Advertisement
Advertisement
ಟಿಕ್‍ಟಾಕ್ ಅಜ್ಜನಿಗೆ ಊರಲ್ಲಿ 4 ಎಕರೆ ಜಮೀನಿದೆ. ಪತ್ನಿ, ಒಬ್ಬ ಮಗನ ಜೊತೆ ಜೀವನ ನಡೆಸುತ್ತಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡೋವಾಗ, ಮನೆಯಲ್ಲಿ ಖಾಲಿ ಕೂತಾಗಲೆಲ್ಲ ಟಿಕ್‍ಟಾಕ್ ವಿಡಿಯೋಗಳನ್ನ ಮಾಡುತ್ತಿರುತ್ತಾರೆ. ಇಲ್ಲಿವರೆಗೆ 800ಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿದ್ದಾರೆ. ಅಜ್ಜ ಈಗ ಕಲಬುರಗಿ, ಬಾಗಲಕೋಟೆಯಲ್ಲೂ ಫುಲ್ ಫೇಮಸ್ ಆಗಿದ್ದಾರೆ.
Advertisement
ಅದರಲ್ಲೂ ಹುಡುಗ ಹುಡುಗಿರಿಗೆ ಟಿಕ್‍ಟಾಕ್ ಮುತ್ಯಾ ಅಚ್ಚುಮೆಚ್ಚು. ಪ್ರಕಾಶ್ ಅಜ್ಜ ತಾನೇ ಸ್ವತಃ ಮೊಬೈಲ್ ನಲ್ಲಿ ಟಿಕ್‍ಟಾಕ್ ಆಪ್ರೆಟ್ ಮಾಡುತ್ತಾರೆ. ಯಾರ ಸಹಾಯವೂ ಇಲ್ಲದೇ ತಾನೇ ಮನೆಯ ಗೋಡೆ, ಕಮಾನುಗಳಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿ ಅಪ್ಲೋಡ್ ಕೂಡ ಮಾಡುತ್ತಾರೆ ಎಂದು ಸ್ಥಳೀಯ ಅಶೋಕ್ ತಿಳಿಸಿದ್ದಾರೆ.