ಚಂಡೀಗಢ್: ವಯಸ್ಸು ಅರವತ್ತಾದರೂ ಯುವ ಮಾಡೆಲ್‍ಗಳೇ ನಾಚುವಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಹರ್ಯಾಣದ ದಿನೇಶ್ ಮೋಹನ್ ಮಿಂಚುತ್ತಿದ್ದಾರೆ. ಸರ್ಕಾರಿ ಉದೋಗ್ಯದಲ್ಲಿದ್ದವರು ಈಗ ಸೂಪರ್ ಮಾಡೆಲ್ ಆಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
60ರ ವಯಸ್ಸಿನಲ್ಲೂ ಕಟ್ಟುಮಸ್ತಾಗಿ ದೇಹ ಮಾಡಿಕೊಂಡಿರುವ ಸೂಪರ್ ಮಾಡೆಲ್ ದಿನೇಶ್ ಮೋಹನ್ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ದಿನೇಶ್ ಮೋಹನ್ ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕೆಲಸ ಒತ್ತಡದಿಂದ ಹಾಗೂ ಸರಿಯಾಗಿ ಆರೋಗ್ಯ ನೋಡಿಕೊಳ್ಳದ ಕಾರಣಕ್ಕೆ ಅತಿಯಾದ ದಪ್ಪವಾಗಿ ಹಾಸಿಗೆ ಹಿಡಿದಿದ್ದರು.
Advertisement
Advertisement
ಬಳಿಕ ವೈದ್ಯರ ಸಲಹೆ ಪಡೆದು ಆರೋಗ್ಯವನ್ನು ಚೇತರಿಸಿಕೊಂಡು, ದಢೂತಿ ದೇಹವನ್ನು ಇಳಿಸಿಕೊಂಡರು. ಬರೋಬ್ಬರಿ 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡರು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ಸಾಕಾಗಿ, ತಮಗೆ ಇಷ್ಟವಾಗಿದನ್ನ ಮಾಡಬೇಕೆಂದು ನಿರ್ಧಾರ ಮಾಡಿದರು. ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು 2016ರಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಹೊಸ ಜರ್ನಿ ಶುರು ಮಾಡಿದರು.
Advertisement
ಅಂದಿನಿಂದ ಉತ್ತಮ ಆರೋಗ್ಯ, ಕಟ್ಟುಮಸ್ತಾದ ದೇಹವನ್ನು ಮಾಡಿಕೊಂಡು ಸೂಪರ್ ಮಾಡೆಲ್ ಆದರು. ಹಲವು ರ್ಯಾಂಪ್ ವಾಕ್, ಫೋಟೋಶೂಟ್‍ನಲ್ಲಿ ಮಿಂಚಿ ಹೆಸರು ಮಾಡಿದರು. ಸದ್ಯ ಇಳಿ ವಯಸ್ಸಿನಲ್ಲೂ ತಮ್ಮ ಖಡಕ್ ಲುಕ್ ಮೂಲಕ ದಿನೇಶ್ ಅವರು ಎಲ್ಲರ ಮನ ಗೆದ್ದಿದ್ದಾರೆ. ಯುವ ಮಾಡೆಲ್‍ಗಳೇ ನಾಚುವಂತೆ ರ್ಯಾಂಪ್ ವಾಕ್‍ನಲ್ಲಿ ಮಿಂಚಿ ಎಲ್ಲರ ಫೆವರೆಟ್ ಆಗಿಬಿಟ್ಟಿದ್ದಾರೆ.
Advertisement
ಇವರು ಕೇವಲ ಯುವಕರಿಗೆ ಮಾತ್ರವಲ್ಲ ವಯಸ್ಸಾದವರಿಗೂ ಕೂಡ ಮಾದರಿಯಾಗಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‍ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಮನೋಬಲ ದೃಢವಾಗಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ, ನಾವು ಅಂದುಕೊಂಡಿರುವುದನ್ನು ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.