ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ ವಿಷಯ ಯಾರಿಗೂ ಹೇಳದಂತೆ ಇಬ್ಬರಿಗೂ 5 ರೂ. ಕೊಟ್ಟು ಕಳಿಸಿದ 60ರ ಮುದುಕ

Public TV
2 Min Read
rape 2 2

ನವದೆಹಲಿ: ಇಬ್ಬರು ಅಪ್ತಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ವಿಷಯ ಯಾರಿಗೂ ಹೇಳದಿರಲು ಬಾಲಕಿಯರಿಗೆ ತಲಾ 5 ರೂ. ನೀಡಿದ 60 ವರ್ಷದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಭಾನುವಾರದಂದು ಈ ಘಟನೆ ನಡೆದಿದೆ. ಕಾರ್ಮಿಕನಾದ ಆರೋಪಿ ಮೊಹಮ್ಮದ್ ಜೈನುಲ್ ಸಿಹಿ ತಿಂಡಿ ಕೊಡೋದಾಗಿ ಹೇಳಿ 5 ಹಾಗೂ 9 ವರ್ಷದ ಬಾಲಕಿಯರನ್ನ ದಕ್ಷಿಣ ದೆಹಲಿಯ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ.

ಡಿಸಿಪಿ ಮಿಲಿಂದ್ ಮಹಾದಿಯೋ ದುಂಬಿರಿ ಈ ಬಗ್ಗೆ ಮಾತನಾಡಿ, ಭಾನುವಾರ ಸಂಜೆ ಬಾಲಕಿಯ ಪೋಷಕರು 100ಕ್ಕೆ ಕರೆ ಮಾಡಿದಾಗ ಪೊಲೀಸರಿಗೆ ವಿಷಯ ಗೊತ್ತಾಗಿದೆ ಎಂದು ಹೇಳಿದ್ರು.

844653 RapeAFPx 1424956003 344

ಇಬ್ಬರೂ ಬಾಲಕಿಯರು 9 ವರ್ಷದ ಬಾಲಕಿಯ ಮನೆಯ ಹೊರಗಡೆ ಆಟವಾಡ್ತಿದ್ದರು. ಈ ವೇಳೆ ಜೈನುಲ್ ಬಂದು ಚಾಕ್ಲೇಟ್ ಮತ್ತು ಸಿಹಿ ತಿಂಡಿ ಕೊಡುವುದಾಗಿ ಆಮಿಷ ಒಡ್ಡಿ ಬಾಲಕಿಯರನ್ನ ಕರೆದುಕೊಂಡು ಹೋಗಿದ್ದಾನೆಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕಿಯರ ಪೋಷಕರು ಕಾರ್ಮಿಕರಾಗಿದ್ದು, ಆರೋಪಿ ಮಕ್ಕಳನ್ನ ಕರೆದುಕೊಂಡು ಹೋದ ವೇಳೆ ಅವರು ಕೆಲಸಕ್ಕೆ ಹೋಗಿದ್ದರು. ಆರೋಪಿ ಬಾಲಕಿಯರನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವಸಗಿದ್ದಾನೆ. ನಂತರ ಈ ವಿಷಯವನ್ನ ಯಾರಿಗೂ ಹೇಳಬಾರದೆಂದು ಎಚ್ಚರಿಕೆ ನೀಡಿ ತಲಾ 5 ರೂ. ನೀಡಿ ಕಳಿಸಿದ್ದಾನೆ. ಬಳಿಕ ಬಾಲಕಿಯರು ಮನೆಗೆ ಹೋಗಿದ್ದಾರೆ ಎಂದು ದುಂಬ್ರೆ ತಿಳಿಸಿದ್ದಾರೆ.

rape minor

ಆರೋಪಿಯ ಎಚ್ಚರಿಕೆಯಿಂದ ಹೆದರಿದ್ದ ಬಾಲಕಿಯರು ಸಂಜೆಯವರೆಗೆ ಯಾರ ಬಳಿಯೂ ಮಾತನಾಡಿರಲಿಲ್ಲ. ಆದ್ರೆ 5 ವರ್ಷದ ಬಾಲಕಿ ನೋವಿನಿಂದ ಅಳತೊಡಗಿದ್ದಳು. ನಂತರ ಆಕೆ ವೃದ್ಧ ವ್ಯಕ್ತಿ ತನ್ನನ್ನು ಮುಟ್ಟಿದ ಬಗ್ಗೆ ತಾಯಿಗೆ ತಿಳಿಸಿದ್ದಳು. ಬಾಲಕಿಯ ಗುಪ್ತಾಂಗದಲ್ಲಿ ಗಾಯಗಳಾಗಿದ್ದನ್ನು ತಾಯಿ ನೋಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

minor raped

ನಂತರ ಎರಡೂ ಕುಟುಂಬಗಳು ಪೊಲೀಸರ ಮೊರೆ ಹೋಗಿದ್ದು, ಅವರ ಹೇಳಿಕೆಗಳನ್ನ ಪೊಲೀಸರು ದಾಖಲಿಸಿಕೊಂಡಿದ್ದರು. ಬಾಲಕಿಯರು ಆರೋಪಿಯನ್ನ ಗುರುತು ಹಿಡಿದರು. ನಂತರ ಎಲ್ಲರನ್ನೂ ಕೌನ್ಸೆಲಿಂಗ್ ಮಾಡಿ ಜೈನುಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಮ್ಮ ತಂಡ ಆತನನ್ನು ಬಂಧಿಸಿದೆ. ಆರೋಪಿಯನ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ದುಂಬಿರಿ ಹೇಳಿದ್ದಾರೆ.

ಜೈನುಲ್‍ಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಆತ ಈ ಕೃತ್ಯವೆಸಗಿದಾಗ ಮನೆಯಲ್ಲಿ ಹೆಂಡತಿ ಮಕ್ಕಳು ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

arrestnew 1 3

rape

rape 6

Share This Article
Leave a Comment

Leave a Reply

Your email address will not be published. Required fields are marked *