ತಿರುವನಂತಪುರಂ: ಜೀವನವು ರಾತ್ರೋರಾತ್ರಿ ಹೇಗೆ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಬದಲಾದ ಅದೃಷ್ಟದ ಕಥೆಯಲ್ಲಿ ಕೇರಳದ ಮಮ್ಮಿಕಾ ಕೂಡ ಒಬ್ಬರಾಗಿದ್ದಾರೆ. 60 ವರ್ಷದ ಮಮ್ಮಿಕಾ ಕೂಲಿ ಕಾರ್ಮಿಕರಾಗಿ ಕೆಲಸ ಮಡುತ್ತಿದ್ದರು. ಆದರೆ ದಿಢೀರಂತ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಮಾಸಿದ ಲುಂಗಿ ಮತ್ತು ಶರ್ಟ್ ತೊಡುತ್ತಿದ್ದರು. ಕೂಲಿ ಕೆಲಸವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇದೀಗ ಇವರನ್ನು ಗುರುತಿಸಿದ ಜಾಹೀರಾತು ಏಜೆನ್ಸಿಯೊಂದು ಮಾಡೆಲ್ ಆಗಿ ಮಾಡಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿವೆ.
View this post on Instagram
ಖ್ಯಾತ ಛಾಯಾಗ್ರಾಹಕ ಶರೀಕ್ ವಯಾಲಿಲ್ ಅದ್ಭುತ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಮಾಡೆಲ್ ಆಗುವ ಮೊದಲು ಅವರು ಹೇಗಿದ್ದರು ಎನ್ನುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
View this post on Instagram
ಕೂಲಿ ಕಾರ್ಮಿಕರ ಡ್ರೆಸ್‍ನಲ್ಲಿದ್ದರೂ ಅದೇನೋ ಗ್ಲಾಮರ್ ಲುಕ್ ಅವರ ಮೊಗದಲ್ಲಿ ಕಾಣುತ್ತದೆ. ಹೀಗಾಗಿ ಮಮ್ಮಿಕಾ ಅವರನ್ನು ಶರೀಕ್ ಅವರು ಮೇಕಪ್ ಕಲಾವಿದಾರ ಮಜ್ನಾಸ್, ಆಶಿಕ್ ಪುವಾದ್ ಮತ್ತು ಶಬೀಬ್ ವಯಾಲಿಲ್ ಅವರಿಂದ ಮೇಕಪ್ ಮಾಡಿಸಿ ಬ್ರ್ಯಾಂಡ್ ಬಟ್ಟೆಯನ್ನು ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಸೂಟುಬೂಟು, ದುಬಾರಿ ಗ್ಲಾಸ್ ಧರಿಸಿ ಖಡಕ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.