ನವದೆಹಲಿ: ಇಸ್ರೋದ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ಯಶಸ್ಸಿನ ಬಳಿಕ ಮೈಸೂರಿನ ರಮೇಶ್ ಕುಂಞಿಕಣ್ಣನ್ (Ramesh Kunhikannan) ಅವರು ಬಿಲಿಯನೇರ್ ಆಗಿದ್ದಾರೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯಿತು. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ರಾಷ್ಟ್ರ ಎಂದೂ ಕೂಡ ಭಾರತ ಖ್ಯಾತಿ ಗಳಿಸಿತು. ಈ ಯಶಸ್ಸಿನ ಬೆನ್ನಲ್ಲೇ 60 ವಯಸ್ಸಿನ ರಮೇಶ್ ಕೋಟ್ಯಧೀಶರಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಬಿಲಿಯನೇರ್‌ಗಳ ಸಂಪತ್ತು 41% ಹೆಚ್ಚಳ – ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಅದಾನಿಗೆ ಅಗ್ರಸ್ಥಾನ
Advertisement
Advertisement
ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಮೈಸೂರಿನ ಕೇನ್ಸ್ ಟೆಕ್ನಾಲಜಿ ಇಂಡಿಯಾದ ಸಂಸ್ಥಾಪಕರಾದ ರಮೇಶ್, ಚಂದ್ರಯಾನ-3 ರೋವರ್ ಮತ್ತು ಲ್ಯಾಂಡರ್ ಎರಡಕ್ಕೂ ಶಕ್ತಿ ನೀಡಲು ಬಳಸುವ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳನ್ನು ಪೂರೈಸಿದ್ದರು.
Advertisement
2022 ರ ನವೆಂಬರ್‌ನಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪ್ರಾರಂಭವಾದಾಗಿನಿಂದ ಕೇನ್ಸ್‌ನ ಷೇರುಗಳು, ಚಂದ್ರನ ಯಶಸ್ವಿ ಕಾರ್ಯಾಚರಣೆಯಲ್ಲಿ ಅದರ ಪಾತ್ರವನ್ನು ಸಾರ್ವಜನಿಕಗೊಳಿಸಿದ ನಂತರ ಇನ್ನೂ 40% ಮೌಲ್ಯವನ್ನು ಪಡೆದುಕೊಂಡಿದೆ. ಇದು ಕುಂಞಿಕಣ್ಣನ್ ಅವರ ನಿವ್ವಳ ಮೌಲ್ಯವನ್ನು ಸುಮಾರು 1.1 ಶತಕೋಟಿ ಡಾಲರ್‌ಗಳನ್ನಾಗಿ ಮಾಡಿತು. ಇದನ್ನೂ ಓದಿ: ಕಿಡ್ನಾಪ್ ಉದ್ಯಮಕ್ಕೆ ಹೆಸರಾದವ್ರು ರಾಜ್ಯದಲ್ಲಿ ರಸ್ತೆ ನಿರ್ಮಿಸಲು ಬಿಡ್ಲಿಲ್ಲ- RJD ವಿರುದ್ಧ ಮೋದಿ ವಾಗ್ದಾಳಿ
Advertisement
ಕೇನ್ಸ್ ಟೆಕ್ನಾಲಜಿ ಇಂಡಿಯಾ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿಗಳನ್ನು ತಯಾರಿಸುವ ಮೂಲಕ ತನ್ನ 137 ಮಿಲಿಯನ್ ಡಾಲರ್ ವಾರ್ಷಿಕ ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ಪಡೆಯುತ್ತದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಇದು ವಿದ್ಯುನ್ಮಾನ ವ್ಯವಸ್ಥೆಗಳು ಮತ್ತು ವಿನ್ಯಾಸ ಸೇವೆಗಳನ್ನು ಆಟೋಮೋಟಿವ್, ಏರೋಸ್ಪೇಸ್, ವೈದ್ಯಕೀಯ ಮತ್ತು ರಕ್ಷಣಾ ಉದ್ಯಮಗಳಿಗೆ ಪೂರೈಸುತ್ತದೆ. ಕೇನ್ಸ್ ಉತ್ಪನ್ನಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಎಲೆಕ್ಟ್ರಾನಿಕ್ ನಿಯಂತ್ರಣಗಳಲ್ಲಿ ವೆಂಟಿಲೇಟರ್‌ಗಳು ಮತ್ತು ರೈಲ್ವೆ ಸಿಗ್ನಲ್‌ಗಳಿಗೆ ಬಳಸಲಾಗುತ್ತದೆ.
ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾದ ಕುಂಞಿಕಣ್ಣನ್ ಅವರು 1988 ರಲ್ಲಿ ಎಲೆಕ್ಟ್ರಾನಿಕ್ಸ್‌ನ ಗುತ್ತಿಗೆ ತಯಾರಕರಾಗಿ ಕೇನ್ಸ್ ಅನ್ನು ಸ್ಥಾಪಿಸಿದರು. ಈಗ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಿಂದ ಕೇನ್ಸ್ ಇತ್ತೀಚಿನ ವರ್ಷಗಳಲ್ಲಿ ಪ್ರಯೋಜನ ಪಡೆದಿದೆ. ಇದನ್ನೂ ಓದಿ: ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ- ಜೈಲಿನಿಂದ್ಲೇ ಕೇಜ್ರಿವಾಲ್ ಪತ್ರ