ಕೋಲಾರ: (Kolara) ದೇವರ ಮೆರವಣಿಗೆ ವೇಳೆ ದಲಿತ ಸಮುದಾಯದ (Dalit Community) ಬಾಲಕ ಮೂರ್ತಿ ಮುಟ್ಟಿದನೆಂದು ಆ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
Advertisement
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಶೋಭಾ ಹಾಗೂ ರಮೇಶ್ ದಂಪತಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ದಂಡ ಹಾಕಲಾಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ- ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳ ಮಹಜರು
Advertisement
Advertisement
ಕಳೆದ 10 ದಿನಗಳ ಹಿಂದೆ ಗ್ರಾಮದ ಭೂತಮ್ಮ ದೇವರ ಮೂರ್ತಿ ಮೆರವಣಿಗೆ ವೇಳೆ, 15 ವರ್ಷದ ಬಾಲಕ ಚೇತನ್ ದೇವರ ಉತ್ಸವ ಮೂರ್ತಿಗಳನ್ನ ಮುಟ್ಟಿದ್ದಾನೆ. ದಲಿತರು ಮೂರ್ತಿ ಮುಟ್ಟಿದ್ದಕ್ಕೆ ಮೈಲಿಗೆಯಾಗಿದೆ. ಮತ್ತೊಮ್ಮೆ ಬಣ್ಣ ಬಳಿಸಬೇಕು. ಹೀಗಾಗಿ ದಂಡ ಕಟ್ಟಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement
ದಂಡ ಕಟ್ಟಲು ಆಗದಿದ್ದರೆ, ಊರು ಬಿಟ್ಟು ಹೋಗುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ ವೆಂಕಟೇಶ್ ಹಾಗೂ ನಾರಾಯಣಸ್ವಾಮಿ ಸೇರಿದಂತೆ 8 ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಆದರೆ ಗ್ರಾಮಸ್ಥರು ಆರೋಪ ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ ಚೆನ್ನಾಗಿ ಓದಿಲ್ಲ ಅಂತ ಕಬ್ಬಿಣದ ರಾಡ್‌ನಿಂದ ಥಳಿಸಿದ ಅಣ್ಣ – ಸಹೋದರ ಸಾವು