ಜಿನಿವಾ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಫಾಲೋವರ್ಸ್ ಪೈಕಿ 60% ಫಾಲೋವರ್ಸ್ ನಕಲಿ ಎಂದು ಎಂದು ಸ್ವಿಜರ್ಲ್ಯಾಂಡ್ ಸಂಸ್ಥೆಯೊಂದು ತಿಳಿಸಿದೆ.
ಟ್ವಿಪ್ಲೊಮೆಸಿ ಸಂಸ್ಥೆಯೊಂದು ಅತಿ ಹೆಚ್ಚು ಫಾಲೋವರ್ ಗಳಿರುವ ವಿಶ್ವದ ಕೆಲ ನಾಯಕರ ಟ್ವಿಟ್ಟರ್ ಖಾತೆಗಳನ್ನು ಅಧ್ಯಯನ ನಡೆಸಿ ಈ ವರದಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ನಕಲಿ ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕರ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಪೋಪ್ ಫ್ರಾನ್ಸಿಸ್ ಅವರಿಗೆ ಎರಡನೇ ಸ್ಥಾನ ಸಿಕ್ಕಿದೆ.
Advertisement
ಪ್ರಧಾನಿ ಮೋದಿ ಅವರ ಖಾತೆಯನ್ನು 4.3 ಕೋಟಿ ಜನ ಫಾಲೋ ಮಾಡುತ್ತಿದ್ದು ಇದರಲ್ಲಿ 60% ಮಂದಿ ನಕಲಿ ಖಾತೆಯನ್ನು ಹೊಂದಿದ್ದಾರೆ. ಪೋಪ್ ಫ್ರಾನ್ಸಿಸ್ ಅವರನ್ನು 1.67 ಕೋಟಿ ಜನ ಫಾಲೋ ಮಾಡುತ್ತಿದ್ದು, ಇದರಲ್ಲಿ 59% ಫಾಲೋವರ್ಸ್ ನಕಲಿ ಎಂದು ಅಧ್ಯಯನ ತಿಳಿಸಿದೆ.
Advertisement
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಒಟ್ಟು 36,96,460 ಮಂದಿ ಫಾಲೋ ಮಾಡುತ್ತಿದ್ದು, ಇದರಲ್ಲಿ 19,80,826 ಮಂದಿ ನಕಲಿ ಫಾಲೋವರ್ಸ್ ಎಂದು ಹೇಳಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 4.79 ಕೋಟಿ ಜನ ಫಾಲೋ ಮಾಡುತ್ತಿದ್ದು ಇದರಲ್ಲಿ 37% ನಕಲಿ ಫಾಲೋವರ್ಸ್ ಇದ್ದಾರೆ.
Advertisement
ಟ್ವಿಟ್ಟರ್ ಆಡಿಟ್ ಅಲ್ಗೋರಿದಂ ಮೂಲಕ ಫ್ರೆಂಡ್ಸ್ ಆಗಿರುವ ವ್ಯಕ್ತಿಗಳಿಗೆ ಎಷ್ಟು ಮಂದಿ ಫಾಲೋವರ್ಸ್ ಗಳಿದ್ದಾರೆ? ಕೊನೆಯ ಬಾರಿ ಟ್ವೀಟ್ ಮಾಡಿದ್ದು ಯಾವಾಗ? ಇದೂವರೆಗೆ ಎಷ್ಟು ಟ್ವೀಟ್ ಮಾಡಿದ್ದಾರೆ ಈ ವಿಚಾರಗಳನ್ನು ಲೆಕ್ಕ ಹಾಕಿ ಈ ಅಧ್ಯಯನ ನಡೆಸಲಾಗಿದೆ.
Advertisement
World Leaders and their Fake followers
Some of the most followed world leaders and their share of bot followers as determined by https://t.co/TdNIomSdNt. Graphics prepared by @Saosasha @gzeromedia#DigitalDiplomacy pic.twitter.com/viid9ZTReV
— Twiplomacy #DigitalDiplomacy (@Twiplomacy) February 21, 2018