ನವದೆಹಲಿ:ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರ ನೋಂದಣಿಯಾಗಿದೆ ಎನ್ನುವ ಆರೋಪದ ಮೇಲೆ ಚುನಾವಣಾ ಆಯೋಗ ತನಿಖೆ ಶುರುಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಚುನಾವಣಾ ಆಯೋಗ ನಾಲ್ಕು ತಂಡವನ್ನು ರಚಿಸಿದೆ. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇದ್ದು ಜೂನ್ 7 ರ ಒಳಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.
Advertisement
ನಕಲಿ ಮತದಾರರು ನೋಂದಣಿಯಾದಲ್ಲಿ ಹೇಗೆ ನೋಂದಣಿಯಾದರು? ಯಾರು ಮಾಡಿದ್ದರು ಎಂದು ವರದಿಯಲ್ಲಿ ಖಚಿತಗೊಳ್ಳಲಿದೆ. 60 ಲಕ್ಷ ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ಆಯೋಗ ತಿಳಿಸಿದೆ.
Advertisement
Advertisement
ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪಗಳಿಗೆ ಸಾಕ್ಷಿಗಳನ್ನು ಆಯೋಗದ ಗಮನಕ್ಕೆ ತಂದಿದ್ದೇವೆ. ಒಬ್ಬ ವ್ಯಕ್ತಿ ಬೇರೇ ಬೇರೇ ಹೆಸರುಗಳಲ್ಲಿ ಮತ ಪಟ್ಟಿಯಲ್ಲಿ ಇರುವುದು. ಒಬ್ಬ ವ್ಯಕ್ತಿ ಹೆಸರು ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಮತಪಟ್ಟಿಯಲ್ಲಿ ಇರುವುದನ್ನು ಆಯೋಗದ ಗಮನಕ್ಕೆ ತಂದಿದ್ದೇವೆ. ನಕಲಿ ಮತದಾರರ ಸೇರ್ಪಡೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲನಾಥ್ ಆರೋಪಿಸಿದ್ದಾರೆ.
Advertisement
ರಾಜ್ಯದ ಜನಸಂಖ್ಯೆ ಶೇ24 ಹೆಚ್ಚಾಗಿದೆ, ಮತದಾರರ ಸಂಖ್ಯೆ ಶೇ.40 ಹೆಚ್ಚಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ನವೆಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಎಲ್ಲಾ 230 ಕ್ಷೇತ್ರಗಳ ಮತಪಟ್ಟಿಯಲ್ಲಿ ಇರುವ ನಕಲಿ ಮತದಾರರ ಹೆಸರನ್ನು ತೆಗೆಯಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
Election Commission of India has ordered the constitution of ECI team for Bhopal & ECI team for Narmadapuram (Hoshangabad) to enquire into the alleged errors in the electoral rolls in #MadhyaPradesh. The final report will be submitted to EC by 7th June, 2018
— ANI (@ANI) June 3, 2018