ಬೆಂಗಳೂರು: 1ನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಂಬಂಧ ರಾಜ್ಯ ಸರ್ಕಾರ (Karnataka Government) ಅಧಿಕೃತ ಆದೇಶ ಹೊರಡಿಸಿದೆ.
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿ 60 ದಿನಗಳವರೆಗೆ ಮಿತಿ ಸಡಿಲ (Age limit Relaxed) ಮಾಡಿತ್ತು. ಇಂದು ಅಧಿಕೃತವಾಗಿ ಆದೇಶ ಮಾಡಿದೆ. ಈ ಮಿತಿ ಸಡಿಲ ಆದೇಶ 2026-27ನೇ ಸಾಲಿನ ದಾಖಲಾತಿಗೆ ಮಾತ್ರ ಅನ್ವಯ ಆಗುವಂತೆ ಆದೇಶ ಮಾಡಲಾಗಿದೆ.

ಶಾಲೆಯ (School_ ಪ್ರಾರಂಭ ಜೂನ್ 1 ರಿಂದ ಅನ್ವಯವಾಗುವಂತೆ 60 ದಿನದ ಅವಧಿಗೆ ಮಗುವಿನ ವಯಸ್ಸು ಲೆಕ್ಕ ಹಾಕಿ ದಾಖಲಾತಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಇದನ್ನೂ ಓದಿ: ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಮಕ್ಕಳ ಪೋಷಕರು ನಿಟ್ಟುಸಿರು
ಮಕ್ಕಳ ಪೋಷಕರು ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಸಿಎಂ, ಡಿಸಿಎಂ, ಶಿಕ್ಷಣ ಸಚಿವರ ಮನೆಗಳಿಗೆ ಪದೇಪದೇ ಹೋಗಿ ಒತ್ತಾಯ ಮಾಡುತ್ತಿದ್ದರು. ಈಗ ಸರ್ಕಾರದ ನಿರ್ಧಾರದಿಂದ ಈ ಮಕ್ಕಳ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಪ್ರತೀ ಬಾರಿಯೂ ಈ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಇದುವರೆಗೆ ಎಲ್‌ಕೆಜಿ, ಯುಕೆಜಿಗೆ ರೆಗ್ಯುಲೇಟರಿ ನಿಯಮ ಇರಲಿಲ್ಲ. ಇದಕ್ಕಾಗಿ ಹೊಸ ಕಾನೂನು ತಂದು ಎಲ್‌ಕೆಜಿ, ಯುಕೆಜಿಯಲ್ಲೇ ದಾಖಲಾತಿಗೆ ವಯೋಮಿತಿ ನಿಗದಿ ಮಾಡಿ ಸ್ಪಷ್ಟತೆ ಕೊಡಲಾಗುವುದು ಎಂದು ಅಧಿವೇಶನದಲ್ಲಿ ಮಧು ಬಂಗಾರಪ್ಪ ತಿಳಿಸಿದ್ದರು. ಇದೀಗ ರಾಜ್ಯ ಸರ್ಕಾರ ಅಧಿಕೃತ ಆದೇಶ ಜಾರಿಗೊಳಿಸಿದೆ. ಇದನ್ನೂ ಓದಿ: ಮೈಸೂರು-ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ರೈಲುಗಳ ಸಂಚಾರ

