– ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಗಂಭೀರ ಆರೋಪ
– ರವಿಕುಮಾರ್ ವಜಾಗೊಳಿಸಿ, ಬಂಧಿಸುವಂತೆ ಆಗ್ರಹ
ಬೆಂಗಳೂರು: ಸರ್ಕಾರದ ಕಚೇರಿಯಲ್ಲಿಯೇ ಡೀಲ್ ನಡೆಯುತ್ತಿದ್ದು, ಈ ಕಾಂಗ್ರೆಸ್ ಸರ್ಕಾರದಲ್ಲಿ 60% ಕಮಿಷನ್ ಕೇಳಲಾಗುತ್ತಿದೆ ಎಂದು ಭೋವಿ ಸಮಾಜದ (Bhovi Community) ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಸ್ಫೋಟಕ ಆರೋಪ ಮಾಡಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ 40% ಕಮಿಷನ್ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಆದರೆ ಇವರ ಅವಧಿಯಲ್ಲಿ 60% ಕಮಿಷನ್ ಕೇಳಲಾಗುತ್ತಿದೆ. ಭೋವಿ ಸಮಾಜದಲ್ಲಿ ನಿರಂತರವಾಗಿ ಅಕ್ರಮ ನಡೆಯುತ್ತಿದೆ ಎಂದು ದೂರಿದರು.
ಸಿದ್ದರಾಮಯ್ಯ (Siddaramaiah) 65 ಕೋಟಿ ರೂ.ಗಳನ್ನು ಭೋವಿ ಸಮಾಜಕ್ಕೆ ಘೋಷಣೆ ಮಾಡಿದ್ದಾರೆ. ಆದರೆ ಬಿಡುಗಡೆಯಾಗಿದ್ದು ಕೇವಲ 13 ಕೋಟಿ ರೂ. ಕಾಂಗ್ರೆಸ್ ಕಾರ್ಯಕರ್ತ ರವಿಕುಮಾರ್ (Ravikumar) ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರು ಭೋವಿ ಸಮಾಜದ ಅಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ ನಿಗಮದ ಅಧ್ಯಕ್ಷರೇ ಬ್ರೋಕರ್ ಜೊತೆಗೆ 60% ಕಮಿಷನ್‌ಗೆ ಬೇಡಿಕೆ ಇಟ್ಟಿರುವ ವಿಡಿಯೋ ಸಿಕ್ಕಿದೆ ಎಂದರು.
ಸಚಿವ ರಾಜಣ್ಣನ ಮಾದರಿಯಲ್ಲಿಯೇ ಈ ಅಧ್ಯಕ್ಷನನ್ನು ವಜಾ ಮಾಡಿ ಬಂಧಿಸಬೇಕು. ರವಿಕುಮಾರ್ ಅವಧಿಯಲ್ಲಿನ ಹಗರಣದ ತನಿಖೆ ನಡೆಯಬೇಕು. ಆತನ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಭದ್ರಾವತಿಯಲ್ಲಿ ಮನೆಗಳ್ಳತನ – ಬೆಂಗಳೂರಿನ ಮಹಿಳೆ ಸೇರಿ ಇಬ್ಬರು ಅರೆಸ್ಟ್
ಫಲಾನುಭವಿಗಳಿಗೆ ನಿಗಮದಲ್ಲಿ 10 ಲಕ್ಷ ರೂ. ಸಾಲ ಸಿಗುತ್ತದೆ. ಆದರೆ ಇದರಲ್ಲಿ ಅಧಿಕಾರಿಗಳು ಕಮೀಷನ್ ತಿಂದು ಫಲಾನುಭವಿಗಳಿಗೆ ಕೊಡೋದು ಕೇವಲ 25 ಸಾವಿರ ರೂ. ಅಷ್ಟೇ. ಈ ವಿಡಿಯೋದಲ್ಲಿ ರವಿಕುಮಾರ್ ಬಂಜಾರದಲ್ಲಿ ಕೋಟಿ ಕೋಟಿ ಡೀಲ್ ನಡೆಯುತ್ತಿದೆ ಎನ್ನುತ್ತಿದ್ದಾರೆ. ಬಿಹಾರ ಚುನಾವಣೆ ಕಲೆಕ್ಷನ್‌ಗ ಈ ಡೀಲ್ ನಡೆಯುತ್ತಿದ್ಯಾ? ನಾನು ಅಹಿಂದ ನಾಯಕ ಎಂದು ಸಿಎಂ ಹೇಳುತ್ತಿದ್ದಾರೆ. ಹಾಗಿದ್ದಾರೆ ಇಂದೇ ರವವಿಕುಮಾರ್ ರಾಜೀನಾಮೆ ಪಡೆಯಲಿ ಎಂದು ಹೇಳಿದರು.
ಭೋವಿ ನಿಗಮದಲ್ಲಿ ನೇರ ಸಾಲ ಸೌಲಭ್ಯ ಯೋಜನೆ ಇದ್ದು ಭೂಮಿ ಖರೀದಿಗೆ ಫಲಾನುಭವಿಗಳಿಗೆ 20 ಲಕ್ಷ ರೂ. ನೀಡಲಾಗುತ್ತದೆ. ಯೋಜನೆಯಲ್ಲಿ ಬ್ರೋಕರ್ ಜೊತೆ ಹತ್ತು ಲಕ್ಷ ರೂ. ದುಡ್ಡು ತೆಗೆದುಕೊಂಡು ಮತ್ತೆ ಹತ್ತು ಲಕ್ಷ ರೂ. ಕೊಡುತ್ತೇವೆ ಎಂದು ಹೇಳುತ್ತಾರೆ. ಚುನಾವಣೆ ಹತ್ತಿರ ಬಂದಾಗ ಈ ನಿಗಮಗಳನ್ನು ಮುಂದಿಟ್ಟು 60% ಕಮೀಷನ್ ಸರ್ಕಾರ ತೆಗೆದುಕೊಳ್ಳುತ್ತಿದೆ ಅಂತಾ ಅನಿಸುತ್ತದೆ ಎಂದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪೆಟ್ರೋಲ್ ಸುರಿದು 26ರ ಲಿವ್ ಇನ್ ಗೆಳತಿಯ ಹತ್ಯೆಗೈದ 52ರ ವ್ಯಕ್ತಿ
ರವಿಕುಮಾರ್ ಸಮಾಜ ಕಲ್ಯಾಣ ಇಲಾಖೆ ನೇರ ಸಂಬಂಧವಿದೆ. ವಿಡಿಯೋದಲ್ಲಿ ಮೇಲೆನೂ ಹಂಚಬೇಕು ಅಂದಿದ್ದಾರೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರೇ ಉತ್ತರ ಕೊಡಬೇಕು. ಮಂತ್ರಿಗಳಿಗೆ ಕೊಡಬೇಕು ಅಂತಾ ವಿಡಿಯೋದಲ್ಲಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ ಭೇಟಿ ಮಾಡಿ ದೂರು ನೀಡುತ್ತೇವೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೇವೆ. ಒಂದು ವೇಳೆ ರವಿಕುಮಾರ್ ವಜಾಗೊಳಿಸದೇ ಇದ್ದರೆ ಸಿಎಂ , ಮಹದೇವಪ್ಪ, ಎಲ್ಲೇ ಹೋದರೂ ನಾವು ಘೇರಾವು ಹಾಕುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಅವಧಿಯಲ್ಲಿಯೂ ಅಕ್ರಮ ನಡೆದಿತ್ತು. ಬೊಮ್ಮಾಯಿ ಅವಧಿಯಲ್ಲಿ ಲೋಕಾಯುಕ್ತ ಎಸಿಬಿಯಲ್ಲಿಯೂ ಅಧಿಕಾರಿಗಳು ಸಿಕ್ಕಿಹಾಕಿಕೊಂಡಿದ್ದರು. ಆದರೆ 85 ಕೋಟಿ ಹಗರಣದ ವಿಚಾರಣೆ ಇನ್ನೂ ಮುಗಿದಿಲ್ಲ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತನಿಖೆ ನಡೆಯುತ್ತಿದ್ದರೂ ಭಯವಿಲ್ಲದೇ ಈ ಡೀಲ್ ನಡೆಯುತ್ತಿದೆ ಅಂದರೆ ನಿಜಕ್ಕೂ ಶಾಕ್ ಆಗುತ್ತಿದೆ. ತೆಲಂಗಾಣದ ಚುನಾವಣಾ ಅವಧಿಯಲ್ಲಿ ವಾಲ್ಮೀಖಿ ಹಗರಣ ಆಯ್ತು. ಭೋವಿ ನಿಗಮದ ತನಿಖೆ ಯಾಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದರು.