ಉತ್ತರಪ್ರದೇಶ ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳ ಸಾವು – ತನಿಖೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ

Public TV
2 Min Read
gorakhpur 1

ಲಕ್ನೋ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥರ ಸ್ವಕ್ಷೇತ್ರದವಾದ ಗೋರಖ್‍ಪುರ್‍ನಲ್ಲಿ ಭಾರೀ ದುರಂತವೊಂದು ನಡೆದಿದೆ. ಕಳೆದ 5 ದಿನಗಳಲ್ಲಿ ಇಲ್ಲಿನ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಅದರಲ್ಲೂ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಮೃತಪಟ್ಟಿವೆ. ಇದರಲ್ಲಿ ಬಹುತೇಕ ನವಜಾತ ಶಿಶುಗಳಾಗಿವೆ ಎಂದು ವರದಿಯಾಗಿದೆ.

ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು ಸಾವನ್ನಪ್ಪಿರುವುದರ ಕುರಿತು ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಆದರೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಮಕ್ಕಳು ಸಾವನ್ನಪ್ಪಿವೆ ಎಂಬ ವರದಿಯನ್ನ ಸರ್ಕಾರ ತಳ್ಳಿಹಾಕಿದೆ.

gorakhpur

ಕಳೆದೊಂದು ದಿನದಲ್ಲಿ ಈ ಆಸ್ಪತ್ರೆಯಲ್ಲಿ 7 ಮಕ್ಕಳು ಸಾವನ್ನಪ್ಪಿವೆ. ಆಗಸ್ಟ್ 10ರಂದು 23 ಮಕ್ಕಳು ಸಾವನ್ನಪ್ಪಿವೆ. ಇದೇ ದಿನದಂದು ಬಾಕಿ ಹಣ ನೀಡದ ಕಾರಣಕ್ಕೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಸಂಸ್ಥೆ ಅದನ್ನ ಸ್ಥಗಿತಗೊಳಿಸಿತ್ತು ಎಂದು ವರದಿಯಾಗಿದೆ. ಆದ್ರೆ ಆಸ್ಪತ್ರೆಗೆ ಬೇರೆ ಸ್ಥಳಗಳಿಂದ ಆಮ್ಲಜನಕ ಸಿಗುತ್ತಿತ್ತು. ಹೀಗಾಗಿ ಆಮ್ಲಜನಕ ಪೂರೈಕೆಯ ಕೊರತೆಯಿಂದ ಮಕ್ಕಳು ಸಾವನ್ನಪ್ಪಿರಲು ಸಆಧ್ಯವಿಲ್ಲ ಎಂದು ಸರ್ಕಾರ ಹೇಳಿಕೆ ನೀಡಿದೆ.

ಆಮ್ಲಜನಕ ಪೂರೈಕೆ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಈ ಬಗ್ಗೆ ಗೋರಖ್‍ಪುರ್‍ನ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಆಗ್ರಹಿಸಿದೆ. 24 ಗಂಟೆಗಳಲ್ಲಿ ತನಿಖಾ ವರದಿ ಹೊರಬರಲಿದೆ ಎಂದು ಉತ್ತರಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಹೇಳಿದ್ದಾರೆ.

gorakhpur 2

ಈ ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಅಂತ ಆರೋಗ್ಯ ಸಚಿವ ಸಿದ್ದಾರ್ಥ್‍ನಾಥ್ ಸಿಂಗ್ ಹೇಳಿದ್ದಾರೆ. ಅಲ್ಲದೆ ಆಗಸ್ಟ್ 9ರಂದು ಮುಖ್ಯಮಂತ್ರಿಗಳು ಬಿಎಂಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ವೇಳೆ ಆಮ್ಲಜನಕ ಕೊರತೆಯ ಬಗ್ಗೆ ಆಸ್ಪತ್ರೆಯವರು ತಿಳಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಫೈಜಾಬಾದ್‍ನ ಇಂದ್ರಪ್ರಸ್ತ ಗ್ಯಾಸ್ ಲಿಮಿಟೆಡ್‍ನಿಂದ ತಡರಾತ್ರಿ ಆಸ್ಪತ್ರೆಗೆ ಸುಮಾರು 300 ಆಮ್ಲಜನಕ ಸಿಲಿಂಡರ್‍ಗಳು ಆಗಮಿಸಿವೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೆಲಾ ಶುಕ್ರವಾರದಂದು ಈ ಬಗ್ಗೆ ಹೇಳಿಕೆ ನೀಡಿದ್ದು, ಬದಲಿ ಆಮ್ಲಜನಕ ವ್ಯವಸ್ಥೆಯನ್ನ ಮಾಡಲಾಗಿತ್ತು. ಆದ್ದರಿಂದ ಆಮ್ಲಜನಕ ಕೊರತೆಯ ಆರೋಪವನ್ನ ಪರಿಗಣಿಸಲು ಸಾಧ್ಯವಿಲ್ಲ ಎಂದು ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಹೇಳಿದ್ದಾಗಿ ತಿಳಿಸಿದ್ದಾರೆ.

gorakhpur 3

ಘಟನೆ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಂದು ಬೆಳಿಗ್ಗೆ ಪ್ರತಿಕ್ರಿಯಿಸಿದ್ದು, ಮಕ್ಕಳು ಸಾವನ್ನಪಿರುವದಕ್ಕೆ ನನಗೆ ತುಂಬಾ ನೋವಾಗಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಘಟನೆಯಿಂದ ತುಂಬಾ ನೋವಾಗಿದೆ. ಸಂತ್ರಸ್ತರ ಕುಟುಂಬಕ್ಕೆ ನನ್ನ ವಿಷಾದವಿದೆ. ಇದಕ್ಕೆ ಬಿಜೆಪಿ ಸರ್ಕರವೇ ಹೊಣೆ. ಈ ದುರಂತಕ್ಕೆ ಕಾರಣವಾದವರನ್ನ ಶಿಕ್ಷಿಸಬೇಕು ಎಂದಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *