ಮುಂಬೈ: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್, ಅರ್ಜುನ್ ಕಪೂರ್ ಮತ್ತು ಜಾನ್ವಿ ಕಪೂರ್ ನಂತರ ಇದೀಗ ನಟ ಅಜಯ್ ದೇವಗನ್ ದುಬಾರಿ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಟ ಅಜಯ್ ದೇವಗನ್‍ರವರು ಜುಹುವಿನಲ್ಲಿ 590 ಚದರ ಅಗಲದ 60 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಖರೀದಿಸಿದ್ದು, ಈ ಬಂಗಲೆ ಪ್ರಸ್ತುತ ಅಜಯ್ ದೇವಗನ್‍ರವರ ಬಂಗಲೆ ಸಮೀಪದಲ್ಲಿದೆ. ಜುಹಿವಿನಲ್ಲಿರುವ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಬಳಿ ಈ ಬಂಗಲೆಯಿದ್ದು ಈ ಪ್ರದೇಶದಲ್ಲಿ ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಧರ್ಮೇಂದ್ರ ಮತ್ತು ಅಕ್ಷಯ್ ಕುಮಾರ್ ನಂತಹ ದೊಡ್ಡ ದೊಡ್ಡ ಸ್ಟಾರ್ ನಟರು ವಾಸವಾಗಿದ್ದಾರೆ.
ಕಳೆದ ಒಂದು ವರ್ಷದಿಂದ ನಟ ಅಜಯ್ ದೇವಗನ್‍ರವರು ಹೊಸ ಬಂಗಲೆ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಡಿಸೆಂಬರ್‍ನಲ್ಲಿ ಡೀಲ್ ಮಾಡಿಕೊಂಡು ಇದೀಗ ಹೊಸ ಬಂಗಲೆಯನ್ನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಮೂಲಗಳು ತಿಳಿಸಿದೆ. ಇನ್ನೂ ಈ ಬಂಗಲೆ ಅಜಯ್‍ದೇವಗನ್ ಹಾಗೂ ತಾಯಿ ವೀಣಾ ಅವರ ಹೆಸರಿನಲ್ಲಿದ್ದು, ಸುಮಾರು 60-70 ಕೋಟಿ ರೂ. ಬೆಲೆ ಬಾಳುವ ಬಂಗಲೆಯಾಗಿದೆ. ಇದನ್ನು ಓದಿ: ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ
ಇತ್ತೀಚೆಗಷ್ಟೇ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸ್ವಾಂಕಿಯಲ್ಲಿ 31 ಕೋಟಿಯ ಅಪಾರ್ಟ್‍ಮೆಂಟ್ ಮತ್ತು ನಟ ಅರ್ಜುನ್ ಕಪೂರ್ ಬಾಂದ್ರಾದಲ್ಲಿರುವ ಗೆಳತಿ ಮಲೈಕಾ ಅರೋರಾ ಅವರ ಮನೆಯ ಬಳಿ 20 ಕೋಟಿ ವೆಚ್ಚದ 4 ಬೆಡ್ ರೂಮ್ ಇರುವ ಅಪಾರ್ಟ್‍ಮೆಂಟ್ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.