– 5 ವಿಕೆಟ್ ಗಳಿಂದ ಗೆದ್ದ ಚೆನ್ನೈ
– ರಾಯುಡು, ಡುಪ್ಲೆಸಿಸ್ ಅರ್ಧಶತಕ
ಅಬುಧಾಬಿ: ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಅಂಬಾಟಿ ರಾಯುಡು ಮತ್ತು ಡುಪ್ಲೆಸಿಸ್ ಶತಕದ ಜೊತೆಯಾಟದಿಂದ ಚೆನ್ನೈ ತಂಡ ಮುಂಬೈ ವಿರುದ್ದ 5 ವಿಕೆಟ್ ಗಳಿಂದ ಜಯಗಳಿಸಿದೆ. ಈ ಮೂಲಕ ಕಳೆದ ಬಾರಿಯ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ.
ಗೆಲ್ಲಲು 163 ರನ್ ಗಳ ಗುರಿಯನ್ನು ಪಡೆದ ಚೆನ್ನೈ 19.2 ಓವರ್ ಗಳಲ್ಲಿ 166 ರನ್ ಹೊಡೆಯುವ ಮೂಲಕ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ.
Advertisement
FIFTY!
First 50 of #Dream11IPL comes up.@RayuduAmbati hits his 19th IPL half-century off 33 deliveries.#MIvCSK pic.twitter.com/fKB5DutNPU
— IndianPremierLeague (@IPL) September 19, 2020
Advertisement
ಆರಂಭದಲ್ಲಿ 6 ರನ್ ಗಳಿಗೆ 2ವಿಕೆಟ್ ಕಳೆದುಕೊಂಡರೂ ರಾಯಡು ಮತ್ತು ಡು ಪ್ಲೆಸಿಸ್ ಮೂರನೇ ವಿಕೆಟಿಗೆ 115 ರನ್ ಗಳ ಜೊತೆಯಾಟ ಗೆಲುವಿಗೆ ಭದ್ರ ಅಡಿಪಾಯ ಹಾಕಿತು.
Advertisement
ರಾಯುಡು 71 ರನ್ (48 ಎಸೆತ, 6 ಬೌಂಡರಿ, 3 ಸಿಕ್ಸರ್ ) ಹೊಡೆದರೆ ಡುಪ್ಲೆಸಿಸ್ ಔಟಾಗದೇ 58ರನ್ (44 ಎಸೆತ, 6 ಬೌಂಡರಿ), ಜಡೇಜಾ 10 ರನ್, ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಯಾಮ್ ಕರ್ರನ್ 28 ರನ್ (6 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರು. ಧೋನಿ 2 ಎಸೆತ ಎದುರಿಸಿದದರೂ ಯಾವುದೇ ರನ್ ಹೊಡೆಯಲಿಲ್ಲ.
Advertisement
A solid ???? run partnership comes up between @faf1307 and @RayuduAmbati.
Can this duo take #CSK home ?#Dream11IPL #MIvCSK pic.twitter.com/PItB3Q0rSH
— IndianPremierLeague (@IPL) September 19, 2020
ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು.
ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಹಾಗೂ ದಿ ಕಾಕ್ ಫೀಲ್ಡಿಗಿಳಿದರು. ರೋಹಿತ್ ಶರ್ಮಾ ಕೇವಲ 10 ಬಾಲ್ಗೆ 12 ರನ್ ಗಳಿಸುವ ಮೂಲಕ ಕ್ಯಾಚ್ ನೀಡಿ ಪಿಯೂಶ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಂತರ ಡಿ ಕಾಕ್ 20 ಬಾಲ್ಗೆ 33 ರನ್ ಗಳಿಸಿ ಔಟಾದರು.
At the halfway mark #CSK are 70/2
Live – https://t.co/HAaPi3BpDG #MIvCSK #Dream11IPL pic.twitter.com/5TZkWnnRaW
— IndianPremierLeague (@IPL) September 19, 2020
ಆರಂಭದಲ್ಲಿ ಅಬ್ಬರಿಸಿದ್ದ ಮುಂಬೈ ಇಂಡಿಯನ್ಸ್ ತಂಡ ನಂತರ ಅಷ್ಟೇ ವೇಗದಲ್ಲಿ ವಿಕೆಟ್ ಕಳೆದುಕೊಂಡಿತು. ಕುಕ್ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 16 ಬಾಲ್ಗೆ 17 ರನ್ ಗಳಿಸಿ ಕ್ಯಾಚ್ ನೀಡಿದರು. ತಿವಾರಿ 31 ಬಾಲ್ಗೆ 42ರನ್ ಗಳಿಸಿದರೂ ಅರ್ಧ ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯಾ 10 ಬಾಲ್ಗೆ 14ರನ್ ಗಳಿಸಿ ಔಟಾದರೆ, ಪೊಲಾರ್ಡ್ 14 ಬಾಲ್ಗೆ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
Deepak Chahar strikes!
Suryakumar hits one straight down the ground, high in the air, but finds Curran in the deep.
Live – https://t.co/HAaPi3BpDG #MIvCSK #Dream11IPL pic.twitter.com/FJSZHR6Chf
— IndianPremierLeague (@IPL) September 19, 2020
ಬೌಲರ್ ಗಳ ಪೈಕಿ ಲುಂಗಿ ಎನ್ಗಿಡಿ 3, ದೀಪಕ್ ಚಹರ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಪಿಯೂಶ್ ಚಾವ್ಲಾ, ಕರಣ್ ತಲಾ ಒಂದು ವಿಕೆಟ್ ಕಿತ್ತರು.