ಬೆಂಗಳೂರು: ಕೊರೊನಾ ಆತಂಕದ ನಡುವೆ ಇಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಿದ್ದಿದೆ. ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಇದನ್ನೂ ಓದಿ: ಎಸ್ಎಸ್ಎಲ್ಸಿ ರಿಸಲ್ಟ್: 6 ಮಂದಿಗೆ 625/625, ಚಿಕ್ಕಬಳ್ಳಾಪುರ ಪ್ರಥಮ
ಈ ಬಾರಿ ಪರೀಕ್ಷೆ ಬರೆದವರ ಪೈಕಿ ಶೇ. 77.74 ಬಾಲಕಿಯರು ತೇರ್ಗಡೆಯಾಗಿದ್ದರೆ, ಶೇ. 66.41 ಬಾಲಕರು ತೇರ್ಗಡೆಯಾಗಿದ್ದಾರೆ. ಈ ಬಾರಿ 6 ಮಂದಿ 625ಕ್ಕೆ 625 ಅಂಕ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಇಬ್ಬರು ಮಾತ್ರ 625ಕ್ಕೆ 625 ಅಂಕ ಪಡೆದುಕೊಂಡಿದ್ದರು.
Advertisement
Advertisement
625 ಅಂಕ ಪಡೆದಿರುವ ವಿದ್ಯಾರ್ಥಿಗಳ ವಿವರ:
1. ಸನ್ನಿಧಿ ಮಹಾಬಲೇಶ್ವರ ಹೆಗ್ಡೆ – ಸರ್ಕಾರಿ ಮಾರಿಕಾಂಬಾ ಪ್ರೌಢಶಾಲೆ ಶಿರಸಿ, ಉತ್ತರ ಕನ್ನಡ
2. ಚಿರಾಯು ಕೆ.ಎಸ್. – ಸೇಂಟ್ ಮೇರಿ ಪ್ರೌಢಶಾಲೆ, 8ನೇ ಮೈಲಿ ತುಮಕೂರು, ನಾಗಸಂದ್ರ, ಬೆಂಗಳೂರು
3. ನಿಖಿಲೇಶ್ ಎನ್ – ಪೂರ್ಣ ಪ್ರಜ್ಞಾ ಪ್ರೌಢಶಾಲೆ, ಸದಾಶಿವ ನಗರ, ಬೆಂಗಳೂರು
Advertisement
4. ಧೀರಜ್ ರೆಡ್ಡಿ ಎಂ.ಪಿ. – ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್ ಹೈಸ್ಕೂಲ್, ಮಂಡ್ಯ
5. ಅನುಷಾ ಎ.ಎಲ್. – ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಸುಬ್ರಹ್ಮಣ್ಯ, ದಕ್ಷಿಣ ಕನ್ನಡ
6. ತನ್ಮಯಿ ಐ.ಪಿ – ಸೆಂಟ್ ಜೋಸೆಫ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಚಿಕ್ಕಮಗಳೂರು