ಬೆಂಗಳೂರು: ಕಳೆದ ಆರು ವರ್ಷಗಳಿಂದ ರೈತರ ಮೇಲೆ ಪ್ರಧಾನಿ ಮೋದಿಯವರ ವಕ್ರದೃಷ್ಟಿ ಬಿದ್ದಿರಲಿಲ್ಲ. ಹೀಗಾಗಿ ರೈತರ ಆದಾಯ ಕಡಿಮೆ ಆಗಿರಲಿಲ್ಲ ಎಂದು ಶಾಸಕ ಕೃಷ್ಣಭೈರೇಗೌಡ ಹೇಳಿದ್ದಾರೆ.
ನಗರದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈಗ ಅಂಬಾನಿ ಮತ್ತು ಅದಾನಿ ಮಾತ್ರ ಶ್ರೀಮಂತರಾದ್ರು. ದೇಶ ಹಿಂದೆ ಬಿದ್ರೆ ಅಂಬಾನಿ ಮಾತ್ರ ಪ್ರಪಂಚದಲ್ಲಿಯೇ ಐದನೇ ಶ್ರೀಮಂತರಾದ್ರು. ಬಿಜೆಪಿ ಇದೇ ರೀತಿ ಮುಂದುವರಿಯಲು ಬಿಟ್ರೆ ದೇಶ ಅಧೋಗತಿಗೆ ಹೋಗುತ್ತೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಕಿತ್ತು ಒಗೆಯುವವರೆಗೂ ಸುಮ್ಮನೆ ಕೂರಬಾರದು ಎಂದು ವಾಗ್ದಾಳಿ ನಡೆಸಿದರು.
Advertisement
ದೇಶದ ಎಲ್ಲಾ ವಿಭಾಗಗಳನ್ನೂ ದೋಚಿದ ಮೇಲೆ ಬಿಜೆಪಿಯ ವಕ್ರ ದೃಷ್ಟಿ ರೈತರ ಮೇಲೆ, ಅವರ ಭೂಮಿ ಮೇಲೆ ಬಿದ್ದಿದೆ.
ರೈತರ ಭೂಮಿಯನ್ನು ಕಿತ್ತುಕೊಂಡು ಮತ್ತೆ ಹಣವಂತರಿಗೆ ಹಂಚಿಕೆ ಮಾಡಲು ಬಿಜೆಪಿ ಸರ್ಕಾರ ರೈತ ವಿರೋಧಿ ಕೃಷಿ ಮಸೂದೆಗಳನ್ನು ಜಾರಿಗೆ ತರಲು ಹೊರಟಿದೆ.
– @krishnabgowda#ರೈತ_ಕಾರ್ಮಿಕರ_ವಿರೋಧಿಬಿಜೆಪಿ #KarnatakaBandh pic.twitter.com/A0mRkpNgBC
— Karnataka Congress (@INCKarnataka) September 28, 2020
Advertisement
ಅಂಬಾನಿ ಪ್ರಪಂಚದ ಐದನೇ ಶ್ರೀಮಂತ ಆಗಿದ್ದಾರೆ. ದೇಶ ಕೆಳಗೆ ಹೋಗಿದೆ, ಇವರು ಮೇಲೆ ಹೋಗುತ್ತಿದ್ದಾರೆ. ದೇಶದಲ್ಲಿ ಏರ್ ಪೊರ್ಟ್ ಗಳನ್ನು ಅದಾನಿಗೆ ನೀಡುತ್ತಿದ್ದಾರೆ. ಇವರ ಕೆಂಗಣ್ಣಿಗೆ ರೈತರಿ ಕಂಡಿರಲಿಲ್ಲ, ಈಗ ಇವರ ಕೆಂಗಣ್ಣಗೆ ಗುರಿ ಮಾಡುತ್ತಿದ್ದಾರೆ. ಅಂಬಾನಿ , ಅದಾನಿಗೆ ಇವರುಗಳು ಎಲ್ಲವನ್ನೂ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಇದನ್ನೂ ಓದಿ: ತೇಜಸ್ವಿ ಸೂರ್ಯರಿಂದ ಕನ್ನಡಿಗರಿಗೆ ಅಪಮಾನ: ಡಿಕೆಶಿ
Advertisement
Advertisement
ಕಾಂಗ್ರೆಸ್ ಧರ್ಮ ಜನರ ಸಮಸ್ಯೆಗಳಲ್ಲಿ ಭಾಗಿಯಾಗುವುದು. ಸಮಸ್ಯೆಗಳನ್ನು ನಾವು ಹೊರಗೆ, ವಿಧಾನಸಭೆಯಲ್ಲಿ ಮಾತಾಡಿದ್ದೇವೆ. ಇವರನ್ನು ತೆಗೆಯದಿದ್ದರೆ ರೈತರು ಉಳಿಯಲ್ಲ, ಕಾರ್ಮಿಕರೂ ಉಳಿಯಲ್ಲ. ಬರಿ ಅದಾನಿ, ಅಂಬಾನಿ ಉಳಿಯುತ್ತಾರೆ. ನಾವು ಚುನಾವಣೆ ಬಂದಾಗ ತಯಾರಿ ಮಾಡುವುದಲ್ಲ ಈಗಿನಿಂದಲೇ ಹೋರಾಟ ಮಾಡಬೇಕು. ಬರೀ ಸಮಸ್ಯೆಗೆ ಪರಿಹಾರ ಬಿಜೆಪಿಯನ್ನು ಕಿತ್ತೊಗೆಯುವುದು. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ಕೆಲಸ ಮಾಡಬೇಕು ಎಂದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ,
ದೇಶದಲ್ಲಿ ಬಡವರ ಸಂಖ್ಯೆ ಹೆಚ್ವುತ್ತಿದೆ. ಉದ್ಯೋಗ ನಷ್ಟ ಆಗುತ್ತಿವೆ, ಉದ್ಯಮ ನಷ್ಟ ಆಗುತ್ತಿವೆ.
ಆದರೆ ಹಣವಂತ ಅಂಬಾನಿ, ಅಧಾನಿಯಂತವರು ಮಾತ್ರವೇ ಶ್ರೀಮಂತರಾಗುತ್ತಿದ್ದಾರೆ.
– @krishnabgowda #ರೈತ_ಕಾರ್ಮಿಕರ_ವಿರೋಧಿಬಿಜೆಪಿ #KarnatakaBandh pic.twitter.com/VT2spVITgJ
— Karnataka Congress (@INCKarnataka) September 28, 2020