ಸಿಯೋಲ್: ಎರಡು ಯೂಟ್ಯೂಬ್ ಜಾನೆಲ್ ನಡೆಸುತ್ತಿರುವ 6 ವರ್ಷದ ಪುಟ್ಟ ಬಾಲಕಿ ಯೂಟ್ಯೂಬ್ ಸ್ಟಾರ್ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾಳೆ.
ದಕ್ಷಿಣ ಕೊರಿಯಾದ ಬಾಲಕಿ ಬೋರಾಮ್, ಯೂಟ್ಯೂಬ್‍ನಲ್ಲಿ 30 ದಶಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ. ಬಾಲಕಿ ಎರಡು ಚಾನೆಲ್‍ಗಳನ್ನು ನಡೆಸುತ್ತಿದ್ದು, ಬೋರಾಮ್ ಟ್ಯೂಬ್ ವ್ಲಾಗ್ 17.5 ಮಿಲಿಯನ್ ಚಂದಾದಾರರು ಮತ್ತು ಬೋರಮ್ ಟ್ಯೂಬ್ ಟಾಯ್ ರಿವ್ಯೂ 13.6 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾಳೆ.
Advertisement
ಈ ಪುಟ್ಟ ಸೆಲೆಬ್ರಿಟಿ ಗಂಗ್ನಮ್‍ನ ಚಿಯೊಂಗ್ಡ್ಯಾಮ್-ಡಾಂಗ್‍ನಲ್ಲಿ 258.3 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಿರುವ 1975ರ ಕಟ್ಟಡವನ್ನು ಖರೀದಿಸಿದ್ದಾರೆ. ಇದು ಸಿಯೋಲ್‍ನ ಸಮೃದ್ಧ ಪ್ರದೇಶಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.
Advertisement
Advertisement
ಬಾಲಕಿ ಬೋರಾಮ್ ಪೋಷಕರು ಆರು ವರ್ಷಗಳ ಹಿಂದೆ ಪುತ್ರಿಯ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ಸದ್ಯ ಈ ಕಂಪನಿಯೇ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದೆ.
Advertisement
ಯೂಟ್ಯೂಬ್ ಸ್ಟಾರ್ ಬೋರಾಮ್ ಪ್ರತಿ ತಿಂಗಳಿಗೆ ಮಾಸಿಕ 16 ಕೋಟಿ ರೂ. ಆದಾಯವನ್ನು ಹೊಂದಿದ್ದಾಳೆ. ಈ ಪುಟ್ಟ ಬಾಲಕಿ ತಾನು ಆಟವಾಡುವ ಹಾಗೂ ಪೋಷಕರೊಂದಿಗೆ ಕಾಲ ಕಳೆಯುವ ಮುದ್ದಾದ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‍ಗೆ ಅಪ್‍ಲೋಡ್ ಮಾಡುತ್ತಾಳೆ. ಈ ವಿಡಿಯೋಗಳು ಅನೇಕರ ಮನ ಗೆದ್ದಿವೆ.
ಕೊರಿಯಾದ ಇತರ ಯೂಟ್ಯೂಬ್ ಚಾನೆಲ್‍ಗಳಿಗಿಂತ ಬೋರಾಮ್‍ನ ಚಾನಲ್‍ಗಳು ಮಾರ್ಕೆಟಿಂಗ್ ಲಾಭದಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ. ಬಾಲಕಿಯ ಹಲವಾರು ವಿಡಿಯೋಗಳು ಲಕ್ಷಾಂತರ ವೀವ್ಸ್ ಗಳಿಸಿವೆ. ಅಷ್ಟೇ ಅಲ್ಲದೆ ಬಾಲಕಿ ತನ್ನ ವಿಡಿಯೋಗಳ ಮೂಲಕ ಉತ್ಪನ್ನಗಳನ್ನು ಉತ್ತೇಜಿಸಲು ಬ್ರಾಂಡ್‍ಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾಳೆ. ಹೀಗಾಗಿ ಆದಾಯವು ಮತ್ತಷ್ಟು ಹೆಚ್ಚಾಗಿದೆ.
ಬೋರಾಮ್ ಮಿಲಿಯನೇರ್ ಆದ ಮೊದಲ ಮಗು ಅಲ್ಲ. ಫೋಬ್ರ್ಸ್ ಪಟ್ಟಿಯಲ್ಲಿ ಹೆಚ್ಚು ಆದಾಯ ಗಳಿಸುವ 10 ಯೂಟ್ಯೂಬ್ ತಾರೆಗಳಲ್ಲಿ ಟಾಯ್ಸ್ ರಿವ್ಯೂ ನಡೆಸುತ್ತಿರುವ ಏಳು ವರ್ಷದ ರಿಯಾನ್ ಅಗ್ರಸ್ಥಾನದಲ್ಲಿದ್ದಾನೆ.