ಹುಬ್ಬಳ್ಳಿ: 60 ವರ್ಷದ ಮುದುಕನೊಬ್ಬ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕು ಧರ್ಮದ ಏಟು ತಿಂದಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಿಗೆ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸಂಗಯ್ಯ ಓಸನೂರಮಠ (60) ಎಂಬಾತನೇ ಅತ್ಯಾಚಾರ ಮಾಡಿದ ಆರೋಪಿ. ಈತ ಮನೆಯಲ್ಲಿ ಯಾರು ಇಲ್ಲದ ವೇಳೆ ಪಕ್ಕದ ಮನೆಯ ಮಗು ಆಟವಾಡಲು ಬಂದಾಗ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ವಿಷಯ ತಿಳಿಯುತ್ತಿದ್ದಂರೆ ಗ್ರಾಮಸ್ಥರು ಆರೋಪಿ ಸಂಗಯ್ಯನನ್ನು ಗ್ರಾಮದ ಅಗಸಿಯ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗಾ ಥಳಿಸಿ, ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.