ಅಹಮದಾಬಾದ್: ಅತ್ಯಾಚಾರ ವಿರೋಧಿಸಿಕ್ಕಾಗಿ 6 ವರ್ಷದ ಬಾಲಕಿಯನ್ನು ಕೊಲೆ ಮಾಡಿರುವ ಘಟನೆ ಗುಜರಾತ್‌ನ (Gujarat) ದಾಹೋದ್ (Dahod) ಜಿಲ್ಲೆಯಲ್ಲಿ ನಡೆದಿದೆ.
ಶಾಲೆಯ ಪ್ರಾಂಶುಪಾಲ ಆರೋಪಿ 55 ವರ್ಷದ ಗೋವಿಂದ್ ನಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement
ಹಿರಿಯ ಪೊಲೀಸ್ ಅಧಿಕಾರಿ ರಾಜದೀಪ್ ಸಿಂಗ್ ಝಾಲಾ ಮಾತನಾಡಿ, ಬಾಲಕಿ ಮನೆಗೆ ಬಾರದಿರುವುದನ್ನು ಕಂಡು ಆಕೆಯ ಪೋಷಕರು ದೂರು ದಾಖಲಿಸಿದ್ದು, ಶಾಲಾ ಆವರಣದಲ್ಲಿ ಆಕೆಯ ಮೃತ ದೇಹ ಪತ್ತೆಯಾಗಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ರಾಜೀನಾಮೆ ಯಾಕೆ ಕೊಡಬೇಕು? ತನಿಖೆಗೆ ಮಾತ್ರ ಮಾತ್ರ ಅನುಮತಿ, ಪ್ರಾಸಿಕ್ಯೂಷನ್‌ಗೆ ಅಲ್ಲ: ಸಿದ್ದರಾಮಯ್ಯ
Advertisement
Advertisement
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 10 ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಆಕೆಯ ಪೋಷಕರ ಮಾಹಿತಿಯ ಪ್ರಕಾರ ಪ್ರತಿದಿನ ಪ್ರಾಂಶುಪಾಲ ಗೋವಿಂದ್ ನಟ್ ಜೊತೆ ಶಾಲೆಗೆ ಹೋಗುತ್ತಿದ್ದಳು ಎಂದು ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
Advertisement
ಘಟನೆಯಾದ ದಿನ ಪ್ರಾಂಶುಪಾಲ ಬಾಲಕಿಯನ್ನು ಶಾಲೆಗೆ ಬಿಟ್ಟು ಯಾವುದೋ ಕೆಲಸಕ್ಕೆ ತೆರಳಿರುವುದಾಗಿ ತಿಳಿಸಿದ್ದಾನೆ. ಆದರೆ ಆ ದಿನ ಅವಳು ಶಾಲೆಗೆ ಬಾರದಿರುವುದನ್ನು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಖಚಿತಪಡಿಸಿದ್ದಾರೆ. ಬಳಿಕ ಪ್ರಾಂಶುಪಾಲರ ಫೋನ್ ಲೊಕೇಶನ್ ಮಾಹಿತಿಯನ್ನು ಪಡೆದುಕೊಂಡಾಗ ಆತನ ಮೇಲೆ ಅನುಮಾನ ಉಂಟಾಗಿದೆ. ಆತನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಬೆಳಿಗ್ಗೆ 10:20ರ ಸುಮಾರಿಗೆ ಬಾಲಕಿಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದನು. ಆಕೆಯ ತಾಯಿ ಆಕೆಯನ್ನು ಪ್ರಿನ್ಸಿಪಾಲ್ ಕಾರಿನಲ್ಲಿ ಕೂರಿಸಿ ಕಳುಹಿಸಿದ್ದಾರೆ. ಶಾಲೆಗೆ ಹೋಗುವ ದಾರಿಯಲ್ಲಿ, ಪ್ರಾಂಶುಪಾಲರು ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ಆಗ ಆಕೆ ಕೂಗಲು ಪ್ರಾರಂಭಿಸಿದಳು. ಅದನ್ನು ತಡೆಗಟ್ಟಲು ನಾನು ಆಕೆಯ ಮುಖಕ್ಕೆ ಕೈಹಿಡಿದಾಗ ಅವಳು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪ್ರಾಂಶುಪಾಲ ತಿಳಿಸಿದ್ದಾನೆ.
ಶಾಲೆ ತಲುಪಿದ ಮೇಲೆ ಆಕೆಯ ಶವವನ್ನು ಕಾರಿನಲ್ಲಿಯೇ ಬಿಟ್ಟು ಬೀಗ ಹಾಕಿ ನಾನು ಶಾಲೆಗೆ ಹೋದೆ. ಸಂಜೆ 5 ಗಂಟೆ ಸುಮಾರಿಗೆ ಆಕೆಯ ಶವವನ್ನು ಶಾಲೆಯ ಕಟ್ಟಡದ ಹಿಂದೆ ಬಿಸಾಕಿದೆ ಹಾಗೂ ಆಕೆಯ ಬ್ಯಾಗ್ ಮತ್ತು ಬೂಟುಗಳನ್ನು ಅವಳ ತರಗತಿಯ ಹೊರಗೆ ಬಿಸಾಕಿರುವುದಾಗಿ ಪ್ರಾಂಶುಪಾಲ ಒಪ್ಪಿಕೊಂಡಿದ್ದಾನೆ.ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ತನಿಖೆ ಪಕ್ಷಾಪಾತವಾಗಿ ನಡೆಯಲು ಸಾಧ್ಯವಿಲ್ಲ: ಶೋಭಾ ಕರಂದ್ಲಾಜೆ
ಸದ್ಯ ಪೊಲೀಸರು ಆರೋಪಿ ಗೋವಿಂದ್ ನಟ್‌ನನ್ನು ಪೋಕ್ಸೊ (POCSO) ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.