ಬೆಂಗಳೂರು: ಇನ್ನೊಂದು ವಾರದಲ್ಲಿ ಬರದ (Drought) ಕುರಿತು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ವರದಿ ರೆಡಿ ಮಾಡಿ ಕೇಂದ್ರಕ್ಕೆ ವರದಿ ಕೊಡುತ್ತೇವೆ. ಈಗಾಗಲೇ 70% ವರದಿ ಸಿದ್ಧವಾಗಿದೆ. 3-4 ದಿನಗಳಲ್ಲಿ ವರದಿ ರೆಡಿ ಮಾಡಿ ಸಚಿವ ಸಂಪುಟದ ಒಪ್ಪಿಗೆ ಪಡೆದು ವರದಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದರು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಟ್ಟು ಸುಪ್ರೀಂನಲ್ಲಿ ವಾದ ಮಾಡಲು ಏನಿದೆ?: ಬೊಮ್ಮಾಯಿ
Advertisement
ಅಂದಾಜಿನ ಪ್ರಕಾರ 40 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಬೆಳೆ 2 ಲಕ್ಷ ಹೆಕ್ಟೇರ್ ಹಾನಿಯಾಗಿದೆ. ಕೃಷಿ ಬೆಳೆ ಹಾನಿ ಅಂದಾಜಿನ ಪ್ರಕಾರ 4 ಸಾವಿರ ಕೋಟಿ ರೂ. ಪರಿಹಾರ ಅಂದಾಜು ಮಾಡಲಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ 200 ಕೋಟಿ ರೂ. ನಷ್ಟ ಪರಿಹಾರ ಕೇಳಲು ಅವಕಾಶ ಇದೆ. ಜಾನುವಾರು ಮೇವಿಗೆ, ಕುಡಿಯುವ ನೀರು ತುರ್ತು ವ್ಯವಸ್ಥೆಗೆ ಪರಿಹಾರ ಕೇಳುತ್ತೇವೆ. ಒಟ್ಟಾರೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಐದೂವರೆ ಸಾವಿರ ಕೋಟಿಯಿಂದ 6 ಸಾವಿರ ಕೋಟಿ ರೂ. ನಷ್ಟ ಪರಿಹಾರವನ್ನು ಕೇಳಲು ಅವಕಾಶವಿದ್ದು, ಇದನ್ನು ಕೇಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಕ್ರಾಂತಿಕಾರಿ ನಿರ್ಧಾರ: ಬೊಮ್ಮಾಯಿ
Advertisement
Advertisement
ಸದ್ಯ 195 ತಾಲೂಕು ಬರ ಘೋಷಣೆ ಆಗಿದೆ. ಇನ್ನೂ 41 ತಾಲೂಕುಗಳು ಉಳಿದಿವೆ. ಇದರಲ್ಲೂ ಮಳೆಯಿಂದ ಅಭಾವ ಆಗಿರುವ 10-12 ತಾಲೂಕು ಇವೆ. ಈ ತಾಲೂಕು ಬರ ಘೋಷಣೆಗೆ ಜನ ಪ್ರತಿನಿಧಿಗಳು ಒತ್ತಡ ಹಾಕುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಾಡುತ್ತೇವೆ. ಆ ಸಭೆಯಲ್ಲಿ ಉಳಿದ ತಾಲೂಕು ಬರ ಘೋಷಣೆ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ – ಅಕ್ಟೋಬರ್ 1 ರಿಂದ ಜಾರಿ: ಕೃಷ್ಣಭೈರೇಗೌಡ
Advertisement
ಬೇರೆ ಬೇರೆ ರಾಜ್ಯಗಳಲ್ಲೂ ಬರ ಬಂದಿದೆ. ಆದರೆ ಯಾವುದೇ ರಾಜ್ಯಗಳು ಬರ ಎಂದು ಘೋಷಣೆ ಮಾಡಿಲ್ಲ. ನಾವು ಎಚ್ಚರಿಕೆವಹಿಸಿ ಬರ ಘೋಷಣೆ ಮಾಡಿದ್ದೇವೆ. ಕೇಂದ್ರದ ಅಧಿಕಾರಗಳ ಜೊತೆ ನಮ್ಮ ಅಧಿಕಾರಗಳು ಸಂಪರ್ಕದಲ್ಲಿ ಇದ್ದಾರೆ. ನಮ್ಮಲ್ಲಿ ಈ ಬಾರಿ ಬೆಳೆಯಲ್ಲಿ ಸ್ವಲ್ಪ ವ್ಯತ್ಯಾಸಗಳು ಆಗಿವೆ. ಬೆಳೆ ಬಂದಿದೆ. ಬೆಳೆ ಹಸಿರಾಗಿದೆ, ಆದರೆ ಇಳುವರಿ ಬರುತ್ತಿಲ್ಲ. ಹೀಗಾಗಿ 4 ಕೃಷಿ ವಿವಿಗಳಿಗೆ ಈ ಬೆಳೆಗಳ ಬಗ್ಗೆ ಅಧ್ಯಯನ ಮಾಡಿ 3-4 ದಿನಗಳಲ್ಲಿ ವರದಿ ನೀಡಲು ತಿಳಿಸಲಾಗಿದೆ. ಇಂತಹ ಬೆಳೆಯನ್ನು ಗ್ರೀನಿ ಡ್ರೌಟ್ ಅಂತ ಈಗಾಗಲೇ ವರದಿಯಲ್ಲಿ ಸೇರಿಸಲಾಗಿದೆ. ಬೆಳೆ ಹಸಿರಾಗಿ ಇದ್ದರೂ ಇಳುವರಿ ಬರುವುದಿಲ್ಲ. ಇದಕ್ಕೆ ಕೇಂದ್ರ ಆಕ್ಷೇಪ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕೃಷಿ ವಿವಿಗಳಿಗೆ ಅಧ್ಯಯನ ಮಾಡಲು ತಿಳಿಸಲಾಗಿದೆ. ವೈಜ್ಞಾನಿಕ ಅಧ್ಯಯನ ಮಾಡಿ ಇದನ್ನು ಕೇಂದ್ರಕ್ಕೆ ವರದಿ ಕೊಡುತ್ತೇವೆ ಎಂದರು. ಇದನ್ನೂ ಓದಿ: ಮಹಿಳಾ ಮೀಸಲಾತಿಯನ್ನ ಕಾಂಗ್ರೆಸ್ ಸ್ವಾಗತ ಮಾಡುತ್ತದೆ: ದಿನೇಶ್ ಗುಂಡೂರಾವ್
ಬರಕ್ಕೆ ಸಂಪೂರ್ಣ ಪರಿಹಾರ ಕೊಡಲು ಸಾಧ್ಯವಿಲ್ಲ. ಆದರೆ ಆದಷ್ಟು ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇನ್ನು ಬಿಜೆಪಿಯವರಿಂದ ಬರ ಪರಿಹಾರಕ್ಕೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಕೊಡಲ್ಲ ಎಂದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ
Web Stories