ವರಮಹಾಲಕ್ಷ್ಮೀ ಹಬ್ಬ ಬಂತು. ಹೆಣ್ಣುಮಕ್ಕಳಿಗಂತೂ ಸೀರೆ ಉಟ್ಟು ಚೆಂದವಾಗಿ ಅಲಂಕಾರ ಮಾಡ್ಕೊಂಡು ಓಡಾಡೋದೇ ಒಂದು ಸಂಭ್ರಮ. ಹಬ್ಬಕ್ಕೆ ಸಿಂಗರಿಸಿಕೊಳ್ಳುವಾಗ ಲೂಸ್ ಹೇರ್ ಇರಬೇಕಾ? ಜಡೆ ಹಾಕಬೇಕಾ ಅಥವಾ ಡಿಫರೆಂಟ್ ಹೇರ್‍ಸ್ಟೈಲ್ ಮಾಡ್ಕೋಬೇಕಾ ಅನ್ನೋದೇ ದೊಡ್ಡ ಕನ್‍ಫ್ಯೂಷನ್. ಡೋಂಟ್ ವರಿ, ಅದಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್. ನಿಮಗೆ ಯಾವುದು ಇಷ್ಟವಾಗುತ್ತದೋ ಆ ಹೇರ್‍ಸ್ಟೈಲ್ ಮಾಡಿಕೊಂಡು ಹಬ್ಬಕ್ಕೆ ಮಿಂಚಿಬಿಡಿ.
1. ಸಿಂಪಲ್ ಫಿಶ್‍ಟೇಲ್ ಜಡೆ
Advertisement
ಇದನ್ನು ಹೇಳಿಕೊಡಬೇಕಿಲ್ಲ. ಕಾಲೇಜು ಹುಡುಗೀರು ಈಗ ಫಿಶ್‍ಟೇಲ್ ಹಾಕೋದು ತುಂಬಾನೆ ಕಾಮನ್. ಉದ್ದ ಕೂದಲಿದ್ರೆ ಫಿಶ್ ಟೇಲ್ ಜಡೆ ಮತ್ತಷ್ಟು ಚೆನ್ನಾಗಿ ಕಾಣುತ್ತೆ. ನಿಮ್ಮ ಮುಖಕ್ಕೆ ಒಪ್ಪುವಂತೆ ಸೈಡಿಗೆ ಬೈತಲೆ ತೆಗದುಕೊಳ್ಳಿ ಅಥವಾ ಬಫ್ ಹಾಕಿ ಹಿಂದಕ್ಕೆ ಬಾಚಿಕೊಳ್ಳಿ. ಮುಂಗುರುಳಿಗಾಗಿ ಸ್ವಲ್ಪ ಕೂದಲನ್ನ ಹಾಗೇ ಬಿಡಿ. ನಂತರ ಬಲಕ್ಕೆ ಅಥವಾ ಎಡಕ್ಕೆ ಜಡೆ ಹೆಣೆದುಕೊಳ್ಳಿ. ರಬ್ಬರ್ ಬ್ಯಾಂಡ್ ಹಾಕಿದ ನಂತರ ಜಡೆಯ ಪ್ರತಿ ಹೆಣೆಯನ್ನ ಹಿಡಿದೆಳೆದು ಅಗಲವಾಗಿಸಿ. ಮುಂದೆ ಬಿಟ್ಟಿರುವ ಕೂದಲನ್ನ ಕರ್ಲ್ ಮಾಡಿ ಅಥವಾ ಸಣ್ಣಗೆ ಹೆಣೆದು ಸೈಡಿಗೆ ಪಿನ್ ಮಾಡಿ. ಜಡೆಯ ಮೊದಲ ಹೆಣೆಯ ಬಳಿ ಚಿಕ್ಕ ರೋಸ್ ಮುಡಿದುಕೊಳ್ಳಿ ಅಥವಾ ಹೇರ್ ಆಕ್ಸಸರಿ ಬಳಸಿ ಸ್ಟೈಲ್ ಮಾಡಿಕೊಳ್ಳಿ.
Advertisement
2. ಫ್ರೆಂಚ್ ನಾಟ್
Advertisement
Advertisement
ಇದು ಎಂಥವರಿಗೂ ಸೂಟ್ ಆಗುವಂತಹ ಹೇರ್‍ಸ್ಟೈಲ್. ಡೀಪ್ ನೆಕ್ ಬ್ಲೌಸ್ ಅಥವಾ ಹೈ ನೆಕ್‍ಬ್ಲೌಸ್ ಯಾವುದೇ ಧರಿಸಿದ್ರೂ ಫ್ರೆಂಚ್ ನಾಟ್ ಹೇರ್‍ಸ್ಟೈಲ್ ಮಾಡಿಕೊಂಡ್ರೆ ತುಂಬಾ ಚೆನ್ನಾಗಿ ಕಾಣುತ್ತದೆ. ಫ್ರೆಂಚ್ ನಾಟ್ ಹಾಕೋದನ್ನ ಹೇಗೆ ಅಂತ ಈ ವಿಡಿಯೋದಲ್ಲಿ ನೋಡಿ.
3. ಟ್ವಿಸ್ಟ್
ಬನ್ ಅಥವಾ ಜಡೆ ಹಾಕಿಕೊಳ್ಳೊದು ಇಷ್ಟವಿಲ್ಲ ಎಂದಾದ್ರೆ ಲೂಸ್ ಹೇರ್‍ಗೆ ಒಂದು ಟ್ವಿಸ್ಟ್ ಕೊಡಿ. ಕೂದಲನ್ನ ಬ್ಲೋ ಡ್ರೈ ಮಾಡಿ ಅಥವಾ ಸ್ಟ್ರೇಟ್ನಿಂಗ್ ಮಾಡಿ ನಂತರ ಈ ಹೇರ್‍ಸ್ಟೈಲ್‍ಗಳನ್ನ ಮಾಡಿಕೊಳ್ಳೋದು ಸೂಕ್ತ. ಇದು ನಿಮಗೆ ಯಂಗ್ ಲುಕ್ ನೀಡುತ್ತದೆ. ಮೇಲ್ಭಾಗದಲ್ಲಿ ಟ್ವಿಸ್ಟ್ ಮಾಡಿ ಸ್ಟೈಲ್ ಮಾಡಿ ಕೂದಲ ತುದಿಯಲ್ಲಿ ಕರ್ಲ್ಸ್ ಮಾಡಿಕೊಳ್ಳಿ.
4. ಲೋ ಬನ್
ತುಂಬಾ ಕ್ಲಾಸಿ ಲುಕ್ ಬೇಕಾದಲ್ಲಿ ಈ ಹೇರ್‍ಸ್ಟೈಲ್ ಖಂಡಿತ ಟ್ರೈ ಮಾಡಿ. ಇದಕ್ಕೆ ನಿಮ್ಮ ಕೂದಲನ್ನ ನೀಟಾಗಿ ಬಾಚೋದು ತುಂಬಾ ಮುಖ್ಯ. ನಿಮ್ಮದು ಗುಂಗುರು ಕೂದಲಾದ್ರೆ ಸ್ಟ್ರೇಟ್ನಿಂಗ್ ಮಾಡಿಕೊಂಡು ನಂತರ ಈ ಹೇರ್‍ಸ್ಟೈಲ್ ಮಾಡಿಕೊಳ್ಳಿ.
5. ಸಖತ್ ಸಿಂಪಲ್
ಮೆಸ್ಸಿ ಬನ್ ನಂತಹ ಲುಕ್ ಬೇಕಾದ್ರೆ ಈ ಹೇರ್‍ಸ್ಟೈಲ್ ಹೇಳಿಮಾಡಿಸಿದ್ದು. ತುಂಬಾ ಸಿಂಪಲ್ ಆಗಿರೋ ಈ ಹೇರ್‍ಸ್ಟೈಲ್ ಮಾಡೋದು ಹೇಗೆ ಅಂತ ಈ ವಿಡಿಯೋದಲ್ಲಿ ನೋಡಿ. ಹೇರ್‍ಸೈಲ್ ಮಾಡಿಕೊಂಡ ನಂತರ ಚೆಂದದ ಹೇರ್ ಆಕ್ಸೆಸರಿ ಅಥವಾ ಕೃತಕ ಹೂ ಬಳಸಿದ್ರೆ ಇದರ ಅಂದ ಇಮ್ಮಡಿಗೊಳ್ಳುತ್ತೆ.
6. ಟ್ರೆಡಿಷನಲ್ ಲುಕ್
ಹಬ್ಬದ ದಿನ ಹೂ ಮುಡಿದುಕೊಂಡು ಸಾಂಪ್ರದಾಯಿಕವಾಗಿ ಕಾಣ್ಬೇಕು ಅನ್ನೋದಾದ್ರೆ ಸಿಂಪಲ್ ಆಗಿ ಒಂದು ಬನ್ ಹಾಕಿಕೊಂಡು ಮಲ್ಲಿಗೆ ದಿಂಡಿನಿಂದ ಸಿಂಗರಿಸಿಕೊಳ್ಳಿ. ರೋಸ್‍ಪೆಟಲ್ ಅಥವಾ ಮೊಗ್ಗು ಬಳಸಿ ಮಾಡೋ ದಿಂಡುಗಳು ಈಗಿನ ಟ್ರೆಂಡ್, ಅದನ್ನ ಟ್ರೈ ಮಾಡಿ.
ಈ ಎಲ್ಲಾ ಹೇರ್‍ಸ್ಟೈಲ್‍ಗಳನ್ನ ನೀವು ಹಬ್ಬಕ್ಕೆ ಮಾತ್ರವಲ್ಲದೆ ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೂ ಟ್ರೈ ಮಾಡಬಹುದು.