– 28 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ಬೆಂಗಳೂರು: ಹಗಲಿನಲ್ಲಿ ಮನೆ ಗುರುತಿಸಿ ರಾತ್ರಿವೇಳೆ ಕಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್‌ನ್ನು ಕೋಡಿಗೆಹಳ್ಳಿ (Kodigehalli) ಪೊಲೀಸರು ಬಂಧಿಸಿದ್ದು, 28 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಆಕ್ಟಿವ್ ಆಗಿದ್ದ ಇರಾನಿ ಗ್ಯಾಂಗ್‌ನ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಗವಿಶ್ರೀಗಳಿಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್
ಈ ಗ್ಯಾಂಗ್‌ನವರು ನಗರದಲ್ಲಿ ಸ್ಟೋನ್ ರಿಂಗ್ಸ್ ವ್ಯಾಪಾರ ಮಾಡುತ್ತಿದ್ದರು. ರಸ್ತೆಯಲ್ಲಿ ಓಡಾಡುತ್ತಾ ಮಾರಾಟ ಮಾಡುತ್ತಿದ್ದರು. ಈ ವೇಳೆ ಒಂಟಿ ಮನೆ, ಬೀಗ ಹಾಕಿರುವ ಮನೆಗಳನ್ನ ಗುರುತಿಸುತ್ತಿದ್ದರು. ಹಗಲಿನಲ್ಲಿ ಮನೆ ಗುರುತಿಸಿ, ರಾತ್ರಿ ಹೋಗಿ ಕಳ್ಳತನ ಮಾಡಿಕೊಂಡು ಬರುತ್ತಿದ್ದರು. ಮನೆಗಳ್ಳತನದ ಜೊತೆಗೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು.
ಮಹಾರಾಷ್ಟ್ರ ಮತ್ತು ಆಂಧ್ರದಿಂದ ಬೆಂಗಳೂರಿಗೆ ಕಳ್ಳತನ ಮಾಡಿಕೊಂಡು ಅಲೆದಾಡುತ್ತಿದ್ದರು. ಒಂದು ಸಾರಿ ನಗರಕ್ಕೆ ಎಂಟ್ರಿ ಕೊಟ್ಟರೆ 7-8 ದಿನ ವಾಸ ಮಾಡಿ ಐದಾರು ಮನೆ, ನಾಲ್ಕೈದು ಸರಗಳ್ಳತನ ಮಾಡಿಕೊಂಡು ಜಾಗ ಖಾಲಿ ಮಾಡುತ್ತಿದ್ದರು.
ಸದ್ಯ ಇರಾನಿ ಗ್ಯಾಂಗ್‌ನ ಆರು ಮಂದಿಯನ್ನ ಪೊಲೀಸರು ಬಂಧಿಸಿದ್ದು, 28 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಹಾಡಹಗಲೇ ಶೂಟೌಟ್ – ಓರ್ವನ ಬರ್ಬರ ಹತ್ಯೆ, ಹಳೇ ದ್ವೇಷಕ್ಕೆ ಹರಿಯಿತಾ ನೆತ್ತರು?