– ರಾಜಭವನಕ್ಕೆ ಇನ್ನೂ ಇಲ್ಲ ಮಾಹಿತಿ
ಬೆಂಗಳೂರು: 8 ತಿಂಗಳ ಬಳಿಕ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕೊನೆಗೂ ಸಂಪುಟ ಪುನಾರಚನೆ ಮುಹೂರ್ತ ಕೂಡಿಬಂದಿದೆ. ಇಂದು ಸಂಜೆ 5.30ಕ್ಕೆ ರಾಜಭವನದಲ್ಲಿ 10 ಮಂದಿ ಸಚಿವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್‍ನಿಂದ 8 ಶಾಸಕರು ಮತ್ತು ಜೆಡಿಎಸ್‍ನಿಂದ ಇಬ್ಬರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದ್ರೆ ಪ್ರಮಾಣವಚನ ಬಗ್ಗೆ ಇನ್ನೂ ರಾಜಭವನಕ್ಕೆ ಅಧಿಕೃತ ಮಾಹಿತಿ ಹೋಗಿಲ್ಲ. ಮೂಲಗಳ ಪ್ರಕಾರ ರಾಜ್ಯಪಾಲರು ಇಂದು ಮತ್ತು ನಾಳೆ ಗುಜರಾತ್ ಪ್ರವಾಸದಲ್ಲಿರುತ್ತಾರೆ. ಹೀಗಾಗಿ ಇಂದೇ ಸಂಪುಟ ಪುನಾರಚನೆ ಆಗುತ್ತಾ ಅನ್ನೋ ಗೊಂದಲ ಮುಂದುವರಿದಿದೆ.
Advertisement
Advertisement
ಅಳೆದು ತೂಗಿ ಜಾತಿವಾರು, ಪ್ರದೇಶವಾರು ಲೆಕ್ಕಾಚಾರಗಳನ್ನ ಹಾಕಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ. ಸಚಿವರು ಯಾರು ಅನ್ನೋದನ್ನ ನೋಡೋದಾದ್ರೆ:
* ಸತೀಶ್ ಜಾರಕಿಹೊಳಿ, ಯಮಕನಮರಡಿ, ಎಸ್‍ಟಿ ಕೋಟಾ
* ಎಂ.ಬಿ. ಪಾಟೀಲ್, ಲಿಂಗಾಯತ, ಬಬಲೇಶ್ವರ ಕ್ಷೇತ್ರ
* ಬಿಸಿ ಪಾಟೀಲ್, ಲಿಂಗಾಯತ, ಹಿರೇಕೆರೂರು ಕ್ಷೇತ್ರ
* ರಹೀಂ ಖಾನ್, ಮುಸ್ಲೀಂ. ಬೀದರ್ ಕ್ಷೇತ್ರ
* ತುಕಾರಾಂ, ಎಸ್‍ಟಿ ಕೋಟಾ, ಸಂಡೂರು ಕ್ಷೇತ್ರ
* ಪರಮೇಶ್ವರ ನಾಯ್ಕ್, ಎಸ್‍ಟಿ ಲಂಬಾಣಿ, ಹೂವಿನಹಡಗಲಿ ಕ್ಷೇತ್ರ
* ತಿಮ್ಮಾಪೂರ, ದಲಿತ ಎಡಗೈ, ಮುಧೋಳ
* ಸಿ.ಎಸ್. ಶಿವಳ್ಳಿ, ಕುರುಬರು, ಕುಂದಗೋಳ
* ಎಂಟಿಬಿ ನಾಗರಾಜ್, ಕುರುಬರು, ಹೊಸಕೋಟೆ
Advertisement
Advertisement
ಅಂದಹಾಗೆ ನಿರೀಕ್ಷೆಯಂತೆ ಇಬ್ಬರಿಂದ ಕಾಂಗ್ರೆಸ್ ಮಂತ್ರಿಗಿರಿ ವಾಪಸ್ ಪಡೆದಿದೆ. ಅವರಲ್ಲಿ ಗುಂಪು ಕಟ್ಕೊಂಡು ಓಡಾಡ್ತಿದ್ದ, ಸಂಪುಟ ಸಭೆಗೂ ಹಾಜರಾಗದೇ ಮೊಂಡಾಟ ಪ್ರದರ್ಶಿಸಿದ್ದ ರಮೇಶ್ ಜಾರಕಿಹೊಳಿ (ಎಸ್‍ಟಿ, ಗೋಕಾಕ್ ಕ್ಷೇತ್ರ) ಮತ್ತು ಅರಣ್ಯ ಸಚಿವ ಶಂಕರ್ (ಕುರುಬ, ರಾಣೆಬೆನ್ನೂರು ಕ್ಷೇತ್ರ) ಸೇರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv