ಚಿಕ್ಕಮಗಳೂರು: ಕರ್ನಾಟಕದಲ್ಲಿ ಆರು ನಕ್ಸಲರು (Six Naxals) ಮುಖ್ಯ ವಾಹಿನಿಗೆ ಬರಲು ಮುಂದಾಗಿದ್ದಾರೆ. ವಿಕ್ರಂಗೌಡ (Vikram Gowda) ಎನ್‌ಕೌಂಟರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕದ (Karnataka) ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಒಪ್ಪಿದ್ದಾರೆ.
ಇಂದು ಬೆಳಗ್ಗೆ ಆರು ನಕ್ಸಲರು ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ಈಗಾಗಲೇ ನಕ್ಸಲರ ಜೊತೆ ಶರಣಾಗತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ಸಮಿತಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಇದನ್ನೂ ಓದಿ: ಕರ್ನಾಟಕದ ಅಯ್ಯಪ್ಪ ಭಕ್ತರೇ ಗಮನಿಸಿ.. ಶಬರಿಮಲೆ ದರ್ಶನಕ್ಕೆ ಸ್ಪಾಟ್ ಬುಕಿಂಗ್ ದಿನಕ್ಕೆ 5,000 ಜನರಿಗೆ ಮಾತ್ರ
Advertisement
ಯಾರ ಮೇಲೆ ಏನು ಕೇಸ್?
ಮುಂಡಗಾರು ಲತಾ (Mundagaru Latha) ವಿರುದ್ಧ 59 ಪ್ರಕರಣಗಳು ದಾಖಲಾಗಿವೆ. ಸುಂದರಿ (Sundari) ವಿರುದ್ಧ ಉಡುಪಿ, ದ.ಕನ್ನಡದಲ್ಲಿ 3 ಕೇಸ್‌ಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ 3 ಪ್ರಕರಣಗಳಿವೆ, ವನಜಾಕ್ಷಿ ವಿರುದ್ಧ15 ಕೇಸ್ ದಾಖಲಾಗಿವೆ. ಕೆ.ವಸಂತ ಮತ್ತು ಟಿ.ಎನ್. ಜೀಶಾ ವಿರುದ್ಧ ಹಲವು ಕೇಸ್‌ಗಳಿವೆ.
Advertisement
ಮುಂಡಗಾರು ಲತಾ
ಮುಂಡಗಾರು ಲತಾ ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಪಿಯುಸಿ ವ್ಯಾಸಂಗ ಅರ್ಧಕ್ಕೆ ಮೊಟಕುಗೂಳಿಸಿದ್ದಾರೆ. ಕುದುರೆಮುಖ ವಿಮೋಚನಾ ಚಳುವಳಿ ಮುಖಾಂತರ ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ನಾಯಕಿಯಾಗಿದ್ದರು.
Advertisement
Advertisement
ಸುಂದರಿ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರಿನ ನಿವಾಸಿಯಾಗಿದ್ದ ಸುಂದರಿ ಸಹೋದರ ವಸಂತ ಅಲಿಯಾಸ್ ಆನಂದ್ ಕೂಡ ನಕ್ಸಲ್ ಆಗಿದ್ದನು. ಸಹೋದರನ ಹಿಂದೆಯೇ ಸುಂದರಿ ಕೂಡ ನಕ್ಸಲ್ ಚಟುವಟಿಕೆಗೆ ಎಂಟ್ರಿಯಾಗಿದ್ದರು. 2010ರ ಎನ್‌ಕೌಂಟರ್‌ನಲ್ಲಿ ಆನಂದ್ ಹತ್ಯೆಯಾಗಿದ್ದ. ಸದ್ಯ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕಿ ಸುಂದರಿ ಇದ್ದಾರೆ.
ವನಜಾಕ್ಷಿ
ಭೂ ಮಾಲೀಕರ ವಿರುದ್ಧ ಹೋರಾಟಕ್ಕೆ ಧುಮುಕಿ ನಕ್ಸಲರ ಹಾದಿಗೆ ಎಂಟ್ರಿ. ವಿದ್ಯಾಭ್ಯಾಸಕ್ಕೂ ಕೊರತೆಯಾಗಿದ್ದ ವನಜಾಕ್ಷಿ ಉಳ್ಳವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ನಕ್ಸಲಿಸಂಗೆ ಎಂಟ್ರಿಯಾಗಿ ಅಲ್ಲಿಂದ ಹೋರಾಟದಲ್ಲಿ ನಿರಂತರವಾಗಿ ಸಾಗಿದ್ದರು.
ಮಾರೆಪ್ಪ ಅರೋಳಿ @ ಜಯಣ್ಣ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರೋಳಿ ಗ್ರಾಮದ ನಿವಾಸಿಯಾ ಮಾರೆಪ್ಪ ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆ ವಿರೋಧಿಸಿ ನಕ್ಸಲಿಸಂಗೆ ಎಂಟ್ರಿಯಾಗಿದ್ದರು. ಪಶ್ಚಿಮ ಘಟಗಳ ಆದಿವಾಸಿಗಳ ಹಕ್ಕುಗಳಿಗೆ ನಕ್ಸಲ್ ಚಳುವಳಿಯಲ್ಲಿ ಭಾಗಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲೂ ಸಕ್ರಿಯ
ಕೆ.ವಸಂತ
ಮೂಲತಃ ತಮಿಳುನಾಡಿನವರಾಗಿರುವ ಕೆ ವಸಂತ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲಿ ಸಕ್ರಿಯ.
ಟಿ.ಎನ್. ಜೀಶಾ
ಕೇರಳದ ಮೂಲದವರಾಗಿದ್ದು ನಕ್ಸಲ್ ಹೋರಾಟದ ಮೂಲಕ ರಾಜ್ಯಕ್ಕೆ ಎಂಟ್ರಿ. ಕರ್ನಾಟಕದ ಕರಾವಳಿ ಭಾಗದ ಹೋರಾಟದಲ್ಲೂ ಸಕ್ರಿಯ.