– ಕಂಟೇನರ್ ಬಿದ್ದು ಕಾರು ಅಪ್ಪಚ್ಚಿ; ಸುಮಾರು 10 ಕಿಮೀವರೆಗೆ ಟ್ರಾಫಿಕ್ ಜಾಮ್
ನೆಲಮಂಗಲ: ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮಣಕ್ಕೀಡಾಗಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Tumkur Bengaluru National Highway) ಟಿ.ಬೇಗೂರು ಬಳಿ ಘಟನೆ ನಡೆದಿದೆ. ಕಾರಿನ ಮೇಲೆ ಕಂಟೇನರ್ ಬಿದ್ದ ಪರಿಣಾಮ ಕಾರಿನಲ್ಲಿದ್ದ 6 ಮಂದಿ (ವಿಜಯಪುರ ಮೂಲದ ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6)) ಸಾವನ್ನಪ್ಪಿದ್ದಾರೆ. ವೀಕೆಂಡ್ ಪ್ರವಾಸ ಕೈಗೊಂಡಿದ್ದ ಕುಟುಂಬ ಮಸಣ ಸೇರಿದೆ. ಇದನ್ನೂ ಓದಿ: ಭಾರತದ ಈ ಮೂರು ರಾಜ್ಯಗಳು ನಮ್ಮವು – ಬಾಂಗ್ಲಾ ಸರ್ಕಾರದ ಸಲಹೆಗಾರನ ಹೊಸ ಕ್ಯಾತೆ
ಇದರಿಂದ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇದನ್ನೂ ಓದಿ: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ – ಇಂದಿನಿಂದ ಮೋದಿ ಕುವೈತ್ ಪ್ರವಾಸ
ಅಪಘಾತದ ವೇಳೆ ಕಂಟೇನರ್ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿತ್ತು. ಇದರಿಂದ ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು. ಹೆವಿ ಲೋಡ್ ಇರುವ ಕಂಟೇನರ್ ಮೇಲೆತ್ತಲು ಲಾರಿ ಬೆಲ್ಟ್, ಚೈನ್‌ಗಳನ್ನ ತರಿಸಲಾಗಿತ್ತು. ಕೊನೆಗೆ ಹರಸಾಹಸ ಪಟ್ಟು ಮೂರು ಕ್ರೇನ್‌ಗಳ ಸಹಾಯದಿಂದ ಕಂಟೇನರ್ ಮೇಲೆತ್ತಿ ಕಾರನ್ನು ಹೊರತೆಗೆದರು.
ಸದ್ಯ ನೆಲಮಂಗಲ ಪೊಲೀಸರು ಹಾಗೂ SP ಸಿ.ಕೆ ಬಾಬಾ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರಿನಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ವೀಕೆಂಡ್ ಪ್ರವಾಸಕ್ಕೆ ಹೊರಟಿದ್ದ ಕುಟುಂಬ 6 ತಿಂಗಳ ಹಿಂದೆಯಷ್ಟೇ ಕಾರು ಖರೀದಿಸಿತ್ತು ಎಂದು ತಿಳಿದುಬಂದಿದೆ.