ನವದೆಹಲಿ: ಛತ್ತೀಸಗಢ (Chattisgarh) ಗಡಿಯ ಸಮೀಪದಲ್ಲಿರುವ ತೆಲಂಗಾಣದ (Telangana) ಭದ್ರಾದ್ರಿ ಕೋತಗುಡೆಮ್ (Bhadradri Kothagudem) ಬಳಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ (Encounter) 6 ಮಾವೋವಾದಿಗಳು (Maoists) ಹತರಾಗಿದ್ದಾರೆ.
ಕರಕಗುಡೆಮ್‌ನ (Karakagudem) ರಘುನಾಥಪಾಲೆಂ (Raghunathpalem) ಬಳಿಯಿರುವ ಕಾಡಿನಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಎನ್‌ಕೌಂಟರ್ ಸಂದರ್ಭದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಅಗ್ನಿಪಥ್‌ನಲ್ಲಿ ಬದಲಾವಣೆ? – ಯೋಜನೆ ಪರಿಷ್ಕರಣೆಗೆ ರಕ್ಷಣಾ ಇಲಾಖೆ ಶಿಫಾರಸು
ಛತ್ತೀಸಗಢ ಭದ್ರತಾ ಪಡೆಗಳು ದಂತೆವಾಡ (Dantewada) ಮತ್ತು ಬಿಜಾಪುರದ (Bijapur) ಗಡಿಯ ಕಾಡಿನಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 6 ಮಹಿಳಾ ಮಾವೋವಾದಿಗಳು ಸೇರಿದಂತೆ ಒಟ್ಟು 9 ಮಾವೋವಾದಿಗಳನ್ನು ಹೊಡೆದುರುಳಿಸಿದ ಎರಡು ದಿನಗಳ ಬಳಿಕ ಈ ಎನ್‌ಕೌಂಟರ್ ನಡೆದಿದೆ.
ದಾಂತೇವಾಡ ಎಸ್‌ಪಿ ಗೌರವ್ ರೈ ಮಾತನಾಡಿ, ನಕ್ಸಲರಿಂದ ಎಸ್‌ಎಲ್‌ಆರ್ ರೈಫಲ್‌ಗಳು, 303 ರೈಫಲ್‌ಗಳು ಮತ್ತು 315 ಬೋರ್ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢ ಎನ್‌ಕೌಂಟರ್‌ನಲ್ಲಿ ಹತರಾದವರಲ್ಲಿ ತೆಲಂಗಾಣದ ಉನ್ನತ ಮಾವೋವಾದಿ ನಾಯಕರಾಗಿದ್ದ ಮಚೆರ್ಲಾ ಇಸೋಬು, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಸದಸ್ಯರಾಗಿದ್ದಾರೆ. ಸಿಪಿಐ ಪಕ್ಷದ ಕೇಂದ್ರ ಮಿಲಿಟರಿ ಮತ್ತು ಮಹಾರಾಷ್ಟ್ರ-ಛತ್ತೀಸಗಢ ಗಡಿಯ ಉಸ್ತುವಾರಿ ವಹಿಸಿದ್ದರು.ಇದನ್ನೂ ಓದಿ: Bigg Boss Tamil 8: ದೊಡ್ಮನೆ ಆಟಕ್ಕೆ ವಿಜಯ್ ಸೇತುಪತಿ ಹೋಸ್ಟ್- ಪ್ರೋಮೋ ಔಟ್