ಗಾಂಧಿನಗರ: ಸರ್ಕಾರಿ ಬಸ್ ಹಾಗೂ ಆಟೋರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್‌ನ (Gujarat) ಪಠಾಣ್‌ನಲ್ಲಿ (Patan) ನಡೆದಿದೆ.
ಸಮಿ-ರಾಧನ್‌ಪುರ ಹೆದ್ದಾರಿಯ ಸಮಿ ಗ್ರಾಮದ ಅಪಘಾತ ಸಂಭವಿಸಿದೆ. ರಾಜ್ಯ ಸಾರಿಗೆ ಬಸ್ ಹಿಮ್ಮತ್‌ನಗರದಿಂದ ಕಚ್ ಕಡೆಗೆ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: ಟಾಯ್ಲೆಟ್‌ಗೆ ಹೋಗಿದ್ದವಳು ಕೊನೆ ಕ್ಷಣದಲ್ಲಿ ಹಾಜರ್ – ಸಿಇಟಿಯಲ್ಲಿ ನಕಲಿ ವಿದ್ಯಾರ್ಥಿ, ತನಿಖೆಗೆ ಆದೇಶ
ಅಪಘಾತದ ರಭಸಕ್ಕೆ ಆಟೋರಿಕ್ಷಾದಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಪೊಲೀಸ್ ರೈಡ್ ವೇಳೆ ಹೋಟೆಲ್ ಕಿಟಕಿಯಿಂದ ನಟ ಶೈನ್ ಟಾಮ್ ಚಾಕೊ ಪರಾರಿ
ಬಸ್ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.