ಟೆಲ್ ಅವಿವ್: ಗಾಜಾ (Gaza) ಪಟ್ಟಿಯ ಮೇಲಿನ ದಾಳಿ ನಿಲ್ಲಿಸುವಂತೆ ಟ್ರಂಪ್ ಸೂಚನೆ ನೀಡಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ.
ಗಾಜಾದಲ್ಲಿ ನಾಲ್ಕು ಜನ ಹಾಗೂ ದಕ್ಷಿಣದ ಖಾನ್ ಯೂನಿಸ್‌ನಲ್ಲಿ ಇಬ್ಬರು ಸೇರಿ ಒಟ್ಟು 6 ಮಂದಿ ಬಲಿಯಾಗಿದ್ದಾರೆ.ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ
ಶುಕ್ರವಾರ (ಅ.3) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದಾಳಿ ನಿಲ್ಲಿಸುವಂತೆ ಇಸ್ರೇಲ್‌ಗೆ (Israel) ಸೂಚನೆ ನೀಡಿದ್ದರು. ಇದೇ ವೇಳೆ ಹಮಾಸ್ (Hamas) ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು, ಶಾಂತಿ ಯೋಜನೆಗೆ ಒಪ್ಪಿಕೊಂಡಿತ್ತು. ಜೊತೆಗೆ ಇಸ್ರೇಲ್ ಯುಎಸ್ (US) ಯೋಜನೆಯೊಂದಿಗೆ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ತಿಳಿಸಿದ್ದರು ಟ್ರಂಪ್.
ಇದಕ್ಕೆ ಪ್ರತಿಕ್ರಿಯಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮನ್ ನೆತನ್ಯಾಹು, ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯ ಮೊದಲ ಭಾಗವನ್ನು ತಕ್ಷಣವೇ ಅನುಷ್ಠಾನಗೊಳಿಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಮಾತಿಗೆ ಬೆಲೆಕೊಡದೇ ಇಸ್ರೇಲ್ ತನ್ನ ಯುದ್ಧ ಚಾಳಿಯನ್ನು ಮುಂದುವರೆಸಿದೆ.
2023ರಲ್ಲಿ ಅ.7ರಂದು ಹಮಾಸ್ ನೇತೃತ್ವದ ದಾಳಿಯಲ್ಲಿ 1,200 ಜನರು ಸಾವನ್ನಪ್ಪಿದರು. ಈ ವೇಳೆ 251 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಅಲ್ಲಿಂದ ಈ ಸಂಘರ್ಷ ಪ್ರಾರಂಭವಾಯಿತು. ಈವರೆಗೂ ಗಾಜಾದಲ್ಲಿ ಇಸ್ರೇಲ್‌ನ 48 ಒತ್ತೆಯಾಳುಗಳಿದ್ದು, ಆ ಪೈಕಿ 20 ಮಂದಿ ಮಾತ್ರ ಬದುಕಿದ್ದಾರೆ ಎಂದು ತಿಳಿಸಿದೆ. ಇನ್ನೂ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಗಾಜಾದಲ್ಲಿ 66,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಗಾಜಾ ಭಾಗಶಃ ನಾಶವಾಗಿದೆ.ಇದನ್ನೂ ಓದಿ: ಸೆಕ್ಸ್ ವರ್ಕರ್ಸ್ ಮೇಲೆ ಹಲ್ಲೆ ನಡೆಸಿ ದರೋಡೆ: ಸಿಂಗಾಪುರದಲ್ಲಿ ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ