ಬೆಂಗಳೂರು: ನಗರದ ಕಲಾಸಿಪಾಳ್ಯ (Kalasipalya) ಬಿಎಂಟಿಸಿ ಬಸ್‌ಸ್ಟಾಪ್‌ನಲ್ಲಿ (BMTC Bus Stand) 6 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.ಇದನ್ನೂ ಓದಿ: ತೆಲಂಗಾಣ; ಮಗಳಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿ ತಂದೆ ಕ್ರೌರ್ಯ
ಕಲಾಸಿಪಾಳ್ಯ ಪೊಲೀಸರು ಹಾಗೂ ಆಂಟಿ ಟೆರರಿಸ್ಟ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿ ಅಡಗಿಸಿಟ್ಟಿದ್ದ 6 ಜಿಲೆಟಿನ್ ಕಡ್ಡಿಗಳು ಬಸ್ ಸ್ಟಾಂಡ್ ಬದಿಯಲ್ಲಿ ಪತ್ತೆಯಾಗಿವೆ. ಮರೆತು ಹೋಗಿದ್ದಾರಾ? ಅಥವಾ ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿದ್ದಾರಾ ಎಂದು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಮಾತನಾಡಿ, 6 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ವ್ಯಕ್ತಿಯೊಬ್ಬ ಈ ಬ್ಯಾಗ್‌ನ ಜೊತೆ ಕುಳಿತಿರುವುದು ಕಂಡುಬಂದಿದ್ದು, ಬಂಡೆ ಹೊಡೆಯುವ ಕೆಲಸಗಾರರು ಬಿಟ್ಟುಹೋಗಿರುವ ಶಂಕೆ ಉಂಟಾಗಿದೆ. ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿದ್ದಾನಾ ಅಥವಾ ಮರೆತು ಹೋಗಿದ್ದಾನಾ ಎಂದು ಪರಿಶೀಲಿಸಲಾಗ್ತಿದೆ. ಜೆಲೆಟಿನ್ ಕಡ್ಡಿ ಹೊರತುಪಡಿಸಿ ಬೇರೆ ಸ್ಫೋಟಕ ವಸ್ತುಗಳು ಇಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ