Sunday, 22nd July 2018

Recent News

ಗಮನಿಸಿ, ಈ ಹುಡುಗಿಗಾಗಿ 6 ಜಿಲ್ಲೆಯ ಪೊಲೀಸರಿಂದ ಹುಡುಕಾಟ!

– ಕಾರಿನಲ್ಲಿ ಊರೂರು ಅಲೆದಾಡುತ್ತಿದ್ದಾಳೆ ವಿದ್ಯಾರ್ಥಿನಿ

ಮಡಿಕೇರಿ: ವಿದ್ಯಾರ್ಥಿನಿಯೋರ್ವಳು ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಕಾರಿನೊಂದಿಗೆ ಮನೆಯಿಂದ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸುರೇಶ್ ಎಂಬವರ ಮಗಳು ದೀಕ್ಷಿತಾ(17) ನಾಪತ್ತೆಯಾದ ವಿದ್ಯಾರ್ಥಿನಿ. ಕಳೆದ ಮೂರು ದಿನಗಳ ಹಿಂದೆ ಸುರೇಶ್ ಎಂಬುವರು ತನ್ನ ಮಗಳನ್ನು ಹೋಟೆಲ್ ಹೋಗೋಣ ಬಾ ಎಂದು ಕರೆದಿದ್ದರು. ಆದ್ರೆ ತಂದೆಯೊಂದಿಗೆ ಹೋಗದ ದೀಕ್ಷಿತಾ ನೀನು ಬೈಕ್ ನಲ್ಲಿ ಹೋಗು ನಾನು ಮತ್ತೆ ಬರುತ್ತೇನೆ ಎಂದು ಹೇಳಿದ್ದಾಳೆ.

ಮಗಳ ಮಾತು ಕೇಳಿ ಸುರೇಶ್ ಬೈಕ್ ನಲ್ಲಿ ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಈಕೆ ಮನೆಯಲ್ಲಿದ್ದ ತಂದೆಯ ಎಟಿಎಂ ಕಾರ್ಡ್ ತೆಗೆದುಕೊಂಡು ಕೆ.ಎ.02 ಝೆಡ್ 3394 ನೋಂದಣಿಯ ಆಲ್ಟೊ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾಳೆ.

ಇತ್ತ ದೀಕ್ಷಿತಾ ಮನೆ ಬಿಟ್ಟು ಹೋಗಿದ್ದಾಳೆಂದು ತಿಳಿದ ಪೋಷಕರು ಹುಡುಕಾಟಕ್ಕೆ ಆರಂಭಿಸಿದ್ದಾರೆ. ಪೋಷಕರು ಗೋಣಿಕೊಪ್ಪ ಮಾರ್ಗವಾಗಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ದೀಕ್ಷಿತಾ ಬಗ್ಗೆ ಸುಳಿವು ಸಿಕ್ಕದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ದೀಕ್ಷಿತಾಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಆದ್ರೆ ದೀಕ್ಷಿತಾ ಮಾತ್ರ ಮಂಡ್ಯ ರಾಮನಗರ ಮತ್ತಿತರ ಊರುಗಲ್ಲಿ ಕಾರಿಗೆ ಪೆಟ್ರೋಲ್ ಹಾಕಿಕೊಂಡು ಮನ ಬಂದತೆ ಊರೂರು ಸುತ್ತುತ್ತಿದ್ದಾಳೆ. ಬುಧವಾರ ಬೆಳಗ್ಗೆ ಮಂಡ್ಯ ರಾಮನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿನಿ ಕಾರ್ ಡ್ರೈವ್ ಮಾಡಿಕೊಂಡು ಹೋಗಿರೊ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಆಧರಿಸಿ ಇದೀಗ ಯುವತಿಯ ಪತ್ತೆಗಾಗಿ 6 ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *